Select Your Language

Notifications

webdunia
webdunia
webdunia
webdunia

ಗ್ರಾಹಕರಿಗೆ ಬಿಗ್ ಶಾಕ್; ಸಬ್ಸಿಡಿ ರಹಿತ ಎಲ್ ಪಿಜಿ ದರ ಏರಿಕೆ

ನವದೆಹಲಿ
ನವದೆಹಲಿ , ಗುರುವಾರ, 2 ಜನವರಿ 2020 (10:45 IST)
ನವದೆಹಲಿ: ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆ ತುಸು ಏರಿಕೆಯಾಗಿದೆ. ಪ್ರತಿ ಸಿಲಿಂಡರ್ ಗೆ ರೂಪಾಯಿ 19ರಂತೆ ಹೆಚ್ಚಿಸಲಾಗಿದೆ.



14.2 ಕೆಜಿಯ ಅಡುಗೆ ಅನಿಲ ಸಿಲಿಂಡರ್ ನ ಬೆಲೆ ಸತತ ಐದನೇ ಬಾರಿಗೆ  ಹೆಚ್ಚಳವಾಗುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ.

ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 714ರೂ ಮತ್ತು ಮುಂಬೈನಲ್ಲಿ 684.50ರೂ ಆಗಲಿದೆಯಂತೆ. ಗ್ರಾಹಕರು ತಮ್ಮ ಪಾಲಿನ ವಾರ್ಷಿಕ ಸಬ್ಸಿಡಿಸಹಿತ 12 ಸಿಲಿಂಡರ್ ಗಳ ಮಿತಿ ಕೊನೆಯಾದ ಬಳಿಕ ಸಬ್ಸಿಡಿರಹಿತ ಬೆಲೆಗೆ ಖರೀದಿಸಬೇಕಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸುವಂತೆ ಆಗ್ರಹಿಸಿದ ತೆಲುಗುದೇಶಂ ಪಕ್ಷದ ಮಾಜಿ ಶಾಸಕ