Publish Date: Wed, 08 Jan 2020 (06:34 IST)
Updated Date: Wed, 08 Jan 2020 (06:36 IST)
ಮಂಗಳೂರು : ಸಿಎಎ, ಎನ್.ಆರ್.ಸಿ ವಿರೋಧಿಸಿ ಹಿಂದೂಗಳನ್ನು ಕೊಲ್ಲುತ್ತೇನೆ ಎಂದು ಪ್ರಚೋದನಾಕಾರಿ ಮೇಸೇಜ್ ನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಅನ್ವರ್ (25) ಬಂಧಿತ ಆರೋಪಿಯಾಗಿದ್ದು, ಕತಾರ್ ದೇಶದಲ್ಲಿ ಉದ್ಯೋಗದಲ್ಲಿದ್ದ ಈತ ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ವೇಳೆ ಇಬ್ಬರು ಬಲಿಯಾದಂತೆ ಹಿಂದೂಗಳನ್ನು ಕೊಂದು ಹಾಕುತ್ತೇನೆಂದು ವಾಯ್ಸ್ ಮೆಸೇಜ್ ಮೂಲಕ ವಾಟ್ಸಾಪ್ ನಲ್ಲಿ ಬೆದರಿಕೆ ಹಾಕಿದ್ದಾನೆ.
ಈ ಬಗ್ಗೆ ಅನ್ವರ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದೀಗ ಊರಿಗೆ ವಾಪಾಸಾದ ಆತನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಟ್ಲ ಪೊಲೀಸರು ಬಂಧಿಸಿದ್ದಾರೆ.