Select Your Language

Notifications

webdunia
webdunia
webdunia
webdunia

ವಿದೇಶಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪಿ ಬಂಧನ

foreign woman
panaji , ಸೋಮವಾರ, 4 ಡಿಸೆಂಬರ್ 2023 (08:57 IST)
15 ಕಿ. ಮೀ ದೂರವಿರುವ ಅಂಜುನಾ ಬೀಚ್‌ನಲ್ಲಿ ಪಾರ್ಟಿಯ ನಂತರ ತೆರಳುವ ಸಂದರ್ಭದಲ್ಲಿ ಆರೋಪಿ ಬೈಕ್‌ನಲ್ಲಿ ಲಿಫ್ಟಿ ನೀಡಿದ್ದನು. ನಂತರ ನನ್ನ ಕೋಣೆಯಲ್ಲಿಯೇ ಅತ್ಯಾಚಾರವೆಸಗಿದ್ದಾನೆ ಎಂದು ಅತ್ಯಾಚಾರಕ್ಕೊಳಗಾದ ಮಹಿಳೆ ಪೆರ್ನೆಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
 
ನಗರದಿಂದ 50 ಕಿ.ಮೀ.ದೂರದಲ್ಲಿರುವ  ಗ್ರಾಮದಲ್ಲಿರುವ ಯೋಗಾ ಗುರುವೊಬ್ಬ 25 ವರ್ಷ ವಯಸ್ಸಿನ  ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. 30 ವರ್ಷ ವಯಸ್ಸಿನ ಆರೋಪಿ  ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ನಂತರ ಪರಾರಿಯಾಗಲು ಪ್ರಯತ್ನಿಸುತ್ತಿರುವಾಗ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
 
ಆರೋಪಿ ಯೋಗಾ ಗುರುವಿನ ಬಳಿ  ಮಹಿಳೆ ಯೋಗಾ ಕಲಿಯುತ್ತಿದ್ದಳು. ಇಬ್ಬರೂ ಅಂಜುನಾ ಬೀಚ್‌ನಲ್ಲಿ ಪಾರ್ಟಿ ಮಾಡಿ ಮತ್ತಿನಲ್ಲಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಘಟನೆಯ ನಂತರ ಆರೋಪಿ ಮುಂಬೈಗೆ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ಬಂದಾಗ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್‌ ಬಂದಿದೆ ಎಂದು ಹೆದರಿಸಿ ₹1.8 ಕೋಟಿ ಸುಲಿಗೆ