Select Your Language

Notifications

webdunia
webdunia
webdunia
Friday, 11 April 2025
webdunia

ಇಂದು ಬಿಡುಗಡೆಯಾಗಲಿದ್ದಾರೆ ಪಾಕ್ ವಶದಲ್ಲಿರುವ ಧೀರಯೋಧ ಅಭಿನಂದನ್ ವರ್ತಮಾನ್

ನವದೆಹಲಿ
ನವದೆಹಲಿ , ಶುಕ್ರವಾರ, 1 ಮಾರ್ಚ್ 2019 (09:20 IST)
ನವದೆಹಲಿ : ಪಾಕಿಸ್ತಾನದ ವಶದಲ್ಲಿರುವ ಭಾರತದ ಧೀರಯೋಧ ಅಭಿನಂದನ್ ವರ್ತಮಾನ್  ಇಂದು ಮಧ್ಯಾಹ್ನ ಭಾರತಕ್ಕೆ  ಆಗಮಿಸಲಿದ್ದಾರೆ.


ಎರಡು ದಿನಗಳಿಂದ ಪಾಕಿಸ್ತಾನದ ವಶದಲ್ಲಿರುವ ಅಭಿನಂದನ್‍ ರನ್ನು ಶಾಂತಿ ಸ್ಥಾಪನೆ ಉದ್ದೇಶದಿಂದ ಬಿಡುಗಡೆ ಮಾಡೋದಾಗಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಇಂದು ರಾವಲ್ಪಿಂಡಿಯಿಂದ ಲಾಹೋರ್‍ ಗೆ ಅಭಿನಂದನ್‍ ರನ್ನು ಕರೆ ತಂದು ಭಾರತೀಯ ವಾಯು ಸೇನೆಯ ಗ್ರೂಪ್ ಕ್ಯಾಪ್ಟನ್ ಥಾಮಸ್ ಕುರಿಯನ್ ಅವರಿಗೆ ಪಾಕ್ ಒಪ್ಪಿಸಲಿದೆ.


ರಾಜತಾಂತ್ರಿಕ ಮಾರ್ಗದ ಮೂಲಕ ಅಭಿನಂದನ್‍ ರನ್ನು ಬಂಧಮುಕ್ತವಾಗಿಸುವಲ್ಲಿ ಭಾರತ ಯಶಸ್ವಿಯಾಗಿದ್ದು, ಇತ್ತ ಇಡೀ ದೇಶವೇ ಧೀರಯೋಧ ಅಭಿನಂದನ್ ಬರುವಿಕೆಗಾಗಿ ಕಾಯುತ್ತಿದೆ. ಸದ್ಯಕ್ಕೆ ರಾವಲ್ಪಿಂಡಿಯ ಸೇನಾ ಮುಖ್ಯಕಚೇರಿಯಲ್ಲಿರುವ ಅಭಿನಂದನ್ ಅವರು ಆರೋಗ್ಯವಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದ ಯೋಧ ಹುತಾತ್ಮನಾದಾಗ ಒಂದು ಮಾತಾಡಲಿಲ್ಲ, ಈಗ್ಯಾಕೆ ಮಾತನಾಡ್ತಿದ್ದೀರಾ? ರಮ್ಯಾಗೆ ಟ್ವಿಟರಿಗರ ಟಾಂಗ್