Select Your Language

Notifications

webdunia
webdunia
webdunia
webdunia

ಖಾಸಗಿ ಅಂಗದಲ್ಲಿ ವಿದೇಶಿ ಕರೆನ್ಸಿ ಬಚ್ಚಿಟ್ಟು ಕಳ್ಳಸಾಗಣಿಕೆ ಮುಂದಾದ ತಂದೆ ಮಗ ಅರೆಸ್ಟ್

ಖಾಸಗಿ ಅಂಗದಲ್ಲಿ ವಿದೇಶಿ ಕರೆನ್ಸಿ ಬಚ್ಚಿಟ್ಟು ಕಳ್ಳಸಾಗಣಿಕೆ ಮುಂದಾದ ತಂದೆ ಮಗ ಅರೆಸ್ಟ್
ನವದೆಹಲಿ , ಶುಕ್ರವಾರ, 1 ಮಾರ್ಚ್ 2019 (06:57 IST)
ನವದೆಹಲಿ : ತಂದೆ-ಮಗ ಇಬ್ಬರು ಲಕ್ಷಾಂತರ ರೂಪಾಯಿ ವಿದೇಶಿ ಕರೆನ್ಸಿಯನ್ನು ತಮ್ಮ ಖಾಸಗಿ ಅಂಗದಲ್ಲಿ ಬಚ್ಚಿಟ್ಟು ಕಳ್ಳಸಾಗಣಿಕೆ ಮಾಡಿ ಸಿಕ್ಕಿಬಿದ್ದ ಘಟನೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.


ತಂದೆ ಹಾಗೂ ಮಗ ಇಬ್ಬರು 68 ಲಕ್ಷ ರೂಪಾಯಿ ವಿದೇಶಿ ಕರೆನ್ಸಿಯನ್ನು ತಮ್ಮ ಖಾಸಗಿ ಅಂಗದಲ್ಲಿ ಬಚ್ಚಿಟ್ಟು ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನವೇರಿದ್ದರು. ಆದರೆ ಕಸ್ಟಮ್ ಅಧಿಕಾರಿಗಳಿಗೆ ಮುಂಬೈನಿಂದ ಹಾಂಕಾಂಗ್ ಗೆ ಹೋಗುತ್ತಿದ್ದ ವಿಮಾನದಲ್ಲಿ ಕರೆನ್ಸಿ ಕಳ್ಳಸಾಗಣೆ ಮಾಡಲಾಗ್ತಿದೆ ಎಂಬ ಮಾಹಿತಿ ಸಿಕ್ಕಿದ ಹಿನ್ನಲೆಯಲ್ಲಿ ಅಧಿಕಾರಿಗಳು ವಿಮಾನದೊಳಗೆ ಪ್ರವೇಶ ಮಾಡಿ ತಪಾಸಣೆ ನಡೆಸಿದ್ದಾರೆ.


ಆಗ ತಂದೆ-ಮಗ ಸಿಕ್ಕಿಬಿದ್ದಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ತಂದೆ-ಮಗನನ್ನು ಬಂಧಿಸಿದ್ದಾರೆ. ಬಂಧಿತ ತಂದೆ-ಮಗನ ಬಳಿ 74 ಸಾವಿರ ಯುರೋ, 13 ಸಾವಿರ ಅಮೆರಿಕನ್ ಡಾಲರ್ ಹಾಗೂ 2400 ಹಾಂಕಾಂಗ್ ಡಾಲರ್ ಇತ್ತಂತೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾಯಿಯನ್ನು ಪ್ರೀತಿಸುವ ನಾಟಕವಾಡುತ್ತಿದ್ದ ಬಾಲಕ ಆಮೇಲೆ ಮಾಡುತ್ತಿದ್ದದ್ದೇನು ಗೊತ್ತಾ?