Publish Date: Thu, 28 Feb 2019 (18:19 IST)
Updated Date: Thu, 28 Feb 2019 (18:21 IST)
ಸರಕಾರಿ ನೌಕರನೊಬ್ಬ ಪಾಪಿ ಪಾಕಿಸ್ತಾನದ ಪರ ಜೈಕಾರ ಕೂಗಿದ್ದಾನೆ. ನೌಕರನ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರತಿಭಟನೆಗಳು ನಡೆದಿವೆ.
ಪಾಕಿಸ್ತಾನದ ಪರ ಜೈಕಾರವನ್ನು ಸರ್ಕಾರಿ ನೌಕರನೊಬ್ಬ ಕೂಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಕೆಎಸ್ ಆರ್ಟಿಸಿ ಬಸ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಇರ್ಫಾನ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಪೋಸ್ಟ್ ಮಾಡಿದ್ದಾನೆ. ಇರ್ಫಾನ್ ಕ್ರಮ ಖಂಡಿಸಿ ಸಾರ್ವಜನಿಕರು ಪುಲ್ ಗರಂ ಆಗಿದ್ದಾರೆ. ಬಸ್ ಘಟಕದ ಬಳಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಕೂಡಲೇ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸಧ್ಯ ಬಂಧನದಲ್ಲಿರುವ ಇರ್ಫಾನ್ ಮೂಲತಃ ಬಾಗಲಕೋಟೆ ನಿವಾಸಿಯಾಗಿದ್ದಾನೆ.