Select Your Language

Notifications

webdunia
webdunia
webdunia
webdunia

ಭಾರತದ ಎಲ್ಲಾ ಸಿನಿಮಾಗಳಿಗೆ ಪಾಕಿಸ್ತಾನ ನಿಷೇಧ

ಭಾರತದ ಎಲ್ಲಾ ಸಿನಿಮಾಗಳಿಗೆ ಪಾಕಿಸ್ತಾನ ನಿಷೇಧ
ಇಸ್ಲಾಮಾಬಾದ್ , ಗುರುವಾರ, 28 ಫೆಬ್ರವರಿ 2019 (09:12 IST)
ಇಸ್ಲಾಮಾಬಾದ್: ಭಾರತೀಯ ವಾಯು ಪಡೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಿದ ನಂತರ ಸಿಟ್ಟಿಗೆದ್ದಿರುವ ಪಾಕಿಸ್ತಾನ ತನ್ನ ದೇಶದಲ್ಲಿ ಭಾರತದ ಎಲ್ಲಾ ಸಿನಿಮಾಗಳಿಗೆ ನಿಷೇಧ ಹೇರಿದೆ.


ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯು ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದರೂ ಆಕ್ರೋಶಗೊಂಡಿರುವ ಪಾಕ್ ಭಾರತದ ಮೇಲೆ ಪ್ರತೀಕಾರ ತೀರಿಸುತ್ತೇವೆ ಎಂದು ಹೇಳಿತ್ತು.

ಇದೀಗ ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಟ್ವೀಟ್ ಮಾಡಿ ಪಾಕಿಸ್ತಾನದಲ್ಲಿ ಭಾರತದ ಯಾವುದೇ ಸಿನಿಮಾವೂ ಪ್ರಸಾರವಾಗಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ, ಮೇಡ್ ಇನ್ ಇಂಡಿಯಾ ಜಾಹೀರಾತುಗಳಿಗೂ ಕತ್ತರಿ ಹಾಕಲು ಸೂಚಿಸಲಾಗಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಕಿ ಗರ್ಲ್ ರಶ್ಮಿಕಾ ಮಂದಣ್ಣ ತಮಿಳಿಗೆ