Select Your Language

Notifications

webdunia
webdunia
webdunia
webdunia

ಮೊಬೈಲ್ ಜಾಸ್ತಿ ಬಳಸ್ಬೇಡ ಅಂದಿದ್ದಕ್ಕೆ ಜಲಪಾತಕ್ಕೆ ಹಾರಿದ ಯುವತಿ!

ಮೊಬೈಲ್ ಜಾಸ್ತಿ ಬಳಸ್ಬೇಡ ಅಂದಿದ್ದಕ್ಕೆ ಜಲಪಾತಕ್ಕೆ ಹಾರಿದ ಯುವತಿ!
ಛತ್ತೀಸ್ಗಢ , ಗುರುವಾರ, 20 ಜುಲೈ 2023 (09:07 IST)
ಛತ್ತೀಸ್ಗಢ : ಇತ್ತೀಚೆಗೆ ಮಕಕ್ಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್ ಬಳಕೆಯಾಗುತ್ತಿದೆ. ಈ ಮೊಬೈಲ್ ಬಳಕೆಯನ್ನು ಮಕ್ಕಳು ಅತಿಯಾಗಿ ಮಾಡಿದರೆ ಪೋಷಕರು ಬುದ್ಧಿ ಮಾತು ಹೇಳುವುದು ಸಹಜ.

ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಮಕ್ಕಳು ತಪ್ಪು ನಿರ್ಧಾರ ತೆಗೆದುಕೊಳ್ಳುವ ಘಟನೆ ಈ ಹಿಂದೆಯೂ ನಡೆದಿದೆ. ಇಂಥದ್ದೇ ಘಟನೆಯೊಂದು ಇದೀಗ ಛತ್ತೀಸ್ಗಢದಲ್ಲಿಯೂ ನಡೆದಿದೆ.

ಹೌದು. ಛತ್ತೀಸ್ಗಢದ ಬಸ್ತಾರ್ನಲ್ಲಿ ಯುವತಿಯೊಬ್ಬಳಿಗೆ ಆಕೆಯ ಪೋಷಕರು ಮೊಬೈಲ್ ಜಾಸ್ತಿ ಬಳಕೆ ಮಾಡದಂತೆ ಬುದ್ಧಿ ಮಾತು ಹೇಳಿದ್ದಾರೆ. ಇಷ್ಟಕ್ಕೆ ಬೇಸರಗೊಂಡ ಆಕೆ 90 ಅಡಿ ಆಳದ ಚಿತ್ರಕೋಟೆ ಜಲಪಾತಕ್ಕೆ ಧುಮುಕಿದ್ದಾಳೆ.

ಜಲಪಾತದ ಬಳಿಗೆ ಬಂದ ಬಳಿಕ ಯುವತಿ ಸ್ವಲ್ಪ ಹೊತ್ತು ಆ ಕಡೆ ಈ ಕಡೆ ಅಲೆದಾಡುತ್ತಿದ್ದಳು. ಇದನ್ನು ಗಮನಿಸಿದ ಸ್ಥಳದಲ್ಲಿದ್ದವರು ಆಕೆಯನ್ನು ಅಲ್ಲಿಂದ ರಕ್ಷಣೆ ಮಾಡಲು ಮನವಿ ಮಾಡಿದರು. ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ಆಕೆಗೂ ಒತ್ತಾಯಿಸಿದರು. ಆದರೆ ಅವರ ಮಾತುಗಳನ್ನು ಯುವತಿ ಕೇಳಿಸಿಕೊಳ್ಳದೇ ಒತ್ತಡಕ್ಕೆ ಒಳಗಾದವಳಂತೆ ಓಡಾಡುತ್ತಿದ್ದಳು.

ಇತ್ತ ಸ್ಥಳದಲ್ಲಿದ್ದ ಕೆಲವು ಯುವಕರು ತಮ್ಮ ಮೊಬೈಲ್ ಫೋನ್ಗಳಲ್ಲಿ ಇಡೀ ಘಟನೆಯ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಕೂಡಲೇ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ಈ ವೀಡಿಯೋ ಸದ್ಯ ವೈರಲ್ ಆಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮಾನವೀಯ ಘಟನೆ : ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ