Publish Date: Tue, 18 Jul 2023 (10:49 IST)
Updated Date: Tue, 18 Jul 2023 (10:51 IST)
ಜೈಪುರ : ಉದಯಪುರದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದರಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಸ್ಫೋಟಗೊಂಡಿದ್ದು ತಕ್ಷಣವೇ ವಿಮಾನವನ್ನು ವಾಪಸ್ ಉದಯಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
ಸೋಮವಾರ ಏರ್ ಇಂಡಿಯಾದ ಎಐ470 ವಿಮಾನ ಉದಯಪುರ ವಿಮಾನ ನಿಲ್ದಾಣದಿಂದ ಟೇಕಾಫ್ ಆಗುತ್ತಿದ್ದ ವೇಳೆ ಪ್ರಯಾಣಿಕರೊಬ್ಬರ ಮೊಬೈಲ್ ಬ್ಯಾಟರಿ ಸ್ಫೋಟಗೊಂಡಿದೆ. ತಕ್ಷಣವೇ ವಿಮಾನವನ್ನು ಮತ್ತೆ ಅದೇ ನಿಲ್ದಾಣದಲ್ಲಿ ಇಳಿಸಲಾಗಿದೆ.