Select Your Language

Notifications

webdunia
webdunia
webdunia
webdunia

ಅಮಾನವೀಯ ಘಟನೆ : ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ

ಅಮಾನವೀಯ ಘಟನೆ : ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ
ಇಂಫಾಲ , ಗುರುವಾರ, 20 ಜುಲೈ 2023 (08:43 IST)
ಇಂಫಾಲ : ಮಣಿಪುರದಲ್ಲಿ ಪುರುಷರ ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲಾಗಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿರುವ ದೃಶ್ಯದ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
 
ಈ ಘಟನೆಗೆ ಭಾರೀ ಖಂಡನೆ ವ್ಯಕ್ತವಾಗಿದ್ದು, ಸೂಕ್ತ ಕ್ರಮಕ್ಕಾಗಿ ಎಲ್ಲೆಡೆ ಆಗ್ರಹಿಸಲಾಗುತ್ತಿದೆ. ವರದಿಗಳ ಪ್ರಕಾರ, ಈ ಘಟನೆ ರಾಜ್ಯ ರಾಜಧಾನಿ ಇಂಫಾಲದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ನಡೆದಿದೆ. ಇಬ್ಬರು ಮಹಿಳೆಯರನ್ನು ಸಮೀಪದ ಹೊಲಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಸ್ಥಳೀಯ ಬುಡಕಟ್ಟು ಸಂಘಟನೆ ಆರೋಪಿಸಿದೆ.

ಈ ಘಟನೆ ನಡೆದ ಹಿಂದಿನ ದಿನವಷ್ಟೇ ಪರಿಶಿಷ್ಟ ಪಂಗಡದ ಮೀಸಲಾಗಿಗಾಗಿ ಮೈತೇಯ್ ಸಮುದಾಯದವರ ಬೇಡಿಕೆಯ ಕುರಿತು ಮೈತೇಯ್ ಹಾಗೂ ಕುಕಿ ಬುಡಕಟ್ಟು ಸಮುದಾಯದವರ ನಡುವೆ ಭಾರೀ ಘರ್ಷಣೆ ಏರ್ಪಟ್ಟಿತ್ತು. ಇದೀಗ ವೀಡಿಯೋಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯರು ಕುಕಿ ಸಮುದಾಯಕ್ಕೆ ಸೇರಿದವರು ಎಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ತಿಳಿಸಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಮತ್ತೆ ಉತ್ತರ ಒಳನಾಡಿನಲ್ಲಿ 5 ದಿನ ಭಾರೀ ಮಳೆ ಸಾಧ್ಯತೆ