Select Your Language

Notifications

webdunia
webdunia
webdunia
webdunia

ಮಗುವಿಗೆ ಜನ್ಮ ನೀಡಿದ 7 ತಿಂಗಳಿಂದ ಕೋಮಾದಲ್ಲಿದ್ದ ಮಹಿಳೆ!

ಮಗುವಿಗೆ ಜನ್ಮ ನೀಡಿದ 7 ತಿಂಗಳಿಂದ ಕೋಮಾದಲ್ಲಿದ್ದ ಮಹಿಳೆ!
ನವದೆಹಲಿ , ಭಾನುವಾರ, 30 ಅಕ್ಟೋಬರ್ 2022 (15:31 IST)
ನವದೆಹಲಿ : 7 ತಿಂಗಳ ಹಿಂದೆ ನಡೆದ ರಸ್ತೆ ಅಪಘಾತ ವೇಳೆ ಗರ್ಭಿಣಿಯೊಬ್ಬಳ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಕೋಮಾ ಸ್ಥಿತಿಯಲ್ಲಿದ್ದ ಆಕೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

23 ವರ್ಷದ ಗರ್ಭಿಣಿಯೊಬ್ಬಳು 2022ರ ಏಪ್ರಿಲ್ನಲ್ಲಿ ತನ್ನ ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಅಪಘಾತವಾಗಿತ್ತು. ಈ ಸಂದರ್ಭದಲ್ಲಿ ಇಬ್ಬರು ಹೆಲ್ಮೇಟ್ ಧರಿಸಿರಲಿಲ್ಲ.

ಇದರಿಂದಾಗಿ ಪತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಆದರೆ ಮಹಿಳೆಗೆ ತೀವ್ರವಾಗಿ ತಲೆಗೆ ಪಟ್ಟು ಬಿದ್ದಿತ್ತು. ಇದರಿಂದಾಗಿ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಟ್ರಾಮಾ ಸೆಂಟರ್ಗೆ ಆಕೆಯನ್ನು ದಾಖಲಿಸಲಾಗಿತ್ತು.

ಆಕೆಯ ಮೆದುಳಿಗೆ ತೀವ್ರವಾದ ಗಾಯಗಳಾಗಿತ್ತು. ಈ ವೇಳೆ ಆಕೆಯನ್ನು ತುರ್ತು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು.

ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ವೈದ್ಯರು ಹಾಗೂ ಕುಟುಂಬಸ್ಥರು ಮಗುವನ್ನು ತೆಗೆಯಬೇಕೋ, ಬೇಡವೋ ಎನ್ನುವುದರ ಕುರಿತು ಸಾಕಷ್ಟು ಚರ್ಚೆಯನ್ನು ನಡೆಸಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಮತಾಂತರವಾಗುವಂತೆ ಒತ್ತಾಯ! 9 ಮಂದಿ ವಿರುದ್ಧ ಕೇಸ್