Select Your Language

Notifications

webdunia
webdunia
webdunia
webdunia

ಸಂಬಂಧ ಹೊಂದುವಂತೆ ಪೀಡಿಸುತ್ತಿದ್ದ ಕಾಮುಕನನ್ನು ಕೊಲೆ ಮಾಡಿದ ಮಹಿಳೆ

ಸಂಬಂಧ ಹೊಂದುವಂತೆ ಪೀಡಿಸುತ್ತಿದ್ದ ಕಾಮುಕನನ್ನು ಕೊಲೆ ಮಾಡಿದ ಮಹಿಳೆ
ಚೆನ್ನೈ , ಬುಧವಾರ, 18 ಮಾರ್ಚ್ 2020 (07:36 IST)
ಚೆನ್ನೈ : ಮಹಿಳೆಯೊಬ್ಬಳು ತನ್ನ ಹಿಂದೆ ಬಿದ್ದ ಕಾಮುಕನ ಕಣ್ಣಿಗೆ ಖಾರದ  ಪುಡಿ ಎರಚಿ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಮಿಳುನಾಡಿನ ಬೋಡಿನಾಯಕನೂರಿನಲ್ಲಿ ನಡೆದಿದೆ.


ರಾಜನ್(31) ಕೊಲೆಯಾದ ವ್ಯಕ್ತಿ, ವಲರ್ಮತಿ(35) ಕೊಲೆ ಮಾಡಿದ ಮಹಿಳೆ. ಪತಿ, ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದ ಇವರಿಬ್ಬರೂ ಪರಿಚಿತರಾಗಿ ಸಂಬಂಧ ಬೆಳೆಸಿದ್ದರು. ಆದರೆ  ವಲರ್ಮತಿ ತನ್ನ ಮಕ್ಕಳಿಗೋಸ್ಕರ ರಾಜನ್ ನಿಂದ ದೂರವಾಗಲು ನಿರ್ಧರಿಸಿದ್ದಳು. ಆದರೆ ರಾಜನ್ ಮಾತ್ರ ಆಕೆಯ ಬೆನ್ನು ಬಿಡದೆ ತನ್ನ ಜೊತೆ ಸಂಬಂಧ ಹೊಂದುವಂತೆ ಪೀಡಿಸುತ್ತಿದ್ದ.


ಇದರಿಂದ ಬೇಸತ್ತ ವಲರ್ಮತಿ ಆತನನ್ನು ಮನೆಗೆ ಕರೆದು ಅವನ ಕಣ್ಣಿಗೆ ಖಾರದ ಪುಡಿ ಎರಚಿ ಅವನ ದೇಹಕ್ಕೆ ಚಾಕುವಿನಿಂದ 20ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದಾಳೆ.ಬಳಿಕ ಪೊಲೀಸರಿಗೆ ಕರೆ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಮೋದಿ ಸರ್ಕಾರದ ಕ್ರಮಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ