Select Your Language

Notifications

webdunia
webdunia
webdunia
webdunia

ಮಹಿಳೆ ಮೇಲೆ ಆಶ್ರಮದಲ್ಲೇ ಸಾಮೂಹಿಕ ಅತ್ಯಾಚಾರ!

ಮಹಿಳೆ ಮೇಲೆ ಆಶ್ರಮದಲ್ಲೇ ಸಾಮೂಹಿಕ ಅತ್ಯಾಚಾರ!
ಲಕ್ನೋ , ಸೋಮವಾರ, 17 ಅಕ್ಟೋಬರ್ 2022 (10:29 IST)
ಲಕ್ನೋ : 52 ವರ್ಷದ ಮಹಿಳೆ ಮೇಲೆ ದೇವಾಲಯದ ಆಶ್ರಮವೊಂದರಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಲಕ್ನೋವಿನಲ್ಲಿ ಗೋಮತಿ ನಗರದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
 
ಇದು ಲಕ್ನೋವಿನಲ್ಲಿ ಕೇವಲ 24 ಗಂಟೆಗಳ ಒಳಗೆ ನಡೆದಿರುವ 2ನೇ ಸಾಮೂಹಿಕ ಅತ್ಯಾಚಾರ ಪ್ರಕರಣವಾಗಿದೆ.

ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಪ್ರಕಾರ, ಘಟನೆ ಅಕ್ಟೋಬರ್ 4 ರಂದು ನಡೆದಿದೆ. ಆಕೆ ಈ ಹಿಂದೆ ಮಥುರಾದ ಆಶ್ರಮದಲ್ಲಿದ್ದು, ಬಳಿಕ ಸನ್ಯಾಸಿನಿಯೊಬ್ಬರ ಶಿಫಾರಸಿನ ಮೇರೆಗೆ ಲಕ್ನೋದಲ್ಲಿರುವ ಆಶ್ರಮಕ್ಕೆ ಬಂದಿದ್ದರು.

ಆಕೆ ಕಳೆದ ತಿಂಗಳು ಲಕ್ನೋ ಆಶ್ರಮಕ್ಕೆ ಸ್ಥಳಾಂತರವಾಗಿದ್ದು, ಬಳಿಕ ಆಕೆಗೆ ಶಿಫಾರಸು ಮಾಡಿದ್ದ ಸನ್ಯಾಸಿನಿ ಕಾರಣಾಂತರಗಳಿಂದ ವಾರಣಾಸಿಗೆ ಹೋಗಿದ್ದರು.

ಈ ವೇಳೆ ಆಶ್ರಮದಲ್ಲಿ ಆಕೆ ಒಂಟಿಯಾಗಿದ್ದು, ಇದೇ ಸಮಯಕ್ಕೆ ಕಾದು ಕುಳಿತಿದ್ದ ಕೆಲ ಕಿಡಿಗೇಡಿ ಆಶ್ರಮವಾಸಿಗಳು ಊಟದಲ್ಲಿ ಮತ್ತು ಬರುವ ಪದಾರ್ಥ ಸೇರಿಸಿ ಆಕೆಗೆ ನೀಡಿದ್ದರು.

ತನಗೆ ಪ್ರಜ್ಞೆ ಬಂದಾಗ ಸಂಪೂರ್ಣ ಬೆತ್ತಲಾಗಿದ್ದು, ನಿಶ್ಶಕ್ತರಾಗಿದ್ದರು. ತನ್ನ ಮೇಲೆ ನಾಲ್ವರು ಅತ್ಯಾಚಾರವೆಸಗಿರುವುದು ತಿಳಿದು, ಈ ಬಗ್ಗೆ ಆಶ್ರಮದ ಮುಖ್ಯಸ್ಥರಿಗೆ ದೂರು ನೀಡಿದ್ದರು. ಆದರೆ ಅವರು ತನಗೆ ಜೀವ ಬೆದರಿಕೆ ಹಾಕಿರುವುದಾಗಿ ಮಹಿಳೆ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಯಿಂದ ಹಲವೆಡೆ ರಸ್ತೆ ಸಂಚಾರ ಬಂದ್!