Publish Date: Mon, 17 Oct 2022 (10:08 IST)
Updated Date: Mon, 17 Oct 2022 (10:30 IST)
ಚಿಕ್ಕಬಳ್ಳಾಪುರ : ತಡರಾತ್ರಿ ಜಿಲ್ಲೆಯಾದ್ಯಾಂತ ಧಾರಕಾರ ಮಳೆಯಾಗಿದ್ದು, ಹಲವೆಡೆ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಜಿಲ್ಲೆಯ ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು ಭಾಗದಲ್ಲಿ ಅತಿ ಹೆಚ್ಚಿನ ಮಳೆಯಾಗಿದೆ. ಗುಡಿಬಂಡೆ ಅಮಾನಿ ಬೈರಸಾಗರ ಕೆರೆ ಅಪಾಯದ ಮಟ್ಟ ಮೀರಿ ಕೋಡಿ ಹರಿಯುತ್ತಿದೆ.
ಎಲ್ಲೆಲ್ಲಿ ಸಂಚಾರ ಬಂದ್?
ಗುಡಿಬಂಡೆ-ಪೇರೇಸಂದ್ರ ಮಾರ್ಗ, ಗುಡಿಬಂಡೆ ಹಂಪಸಂದ್ರ-ಬಾಗೇಪಲ್ಲಿ ಮಾರ್ಗ, ಗುಡಿಬಂಡೆ-ಲಕ್ಕೇನಹಳ್ಳಿ ಮಾರ್ಗ, ರಾಮಪಟ್ಟಣ ನವಿಲುಗುರ್ಕಿ ಮಾರ್ಗ, ಗುಡಿಬಂಡೆ ಅಮಾನಿ ಭೈರಸಾಗರ ಮಾರ್ಗಗಳಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತಿರುವುದರಿಂದ ಜಲದಿಗ್ಬಂಧನವಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿರುವ ಮಾರ್ಗಗಳಲ್ಲೂ ಸಂಚಾರ ಕಷ್ಟಕರವಾಗಿದೆ.