ಅಪರಿಚಿತ ಮಹಿಳೆ ಜೊತೆ ದೈಹಿಕ ಸಂಬಂಧ ಬೆಳೆಸಿ ಪೇಚಿಗೆ ಸಿಲುಕಿದ ವಿವಾಹಿತ ವ್ಯಕ್ತಿ

ಶುಕ್ರವಾರ, 11 ಜನವರಿ 2019 (07:10 IST)
ಪುಣೆ : ಅಪರಿಚಿತ ಮಹಿಳೆ ಜೊತೆ ಸಂಬಂಧ ಬೆಳೆಸಿದ ವಿವಾಹಿತನೊಬ್ಬ ಆಕೆಯ ಕಿರುಕುಳ ಸಹಿಸದೆ ನ್ಯಾಯಕ್ಕಾಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.


ಅಭಯ್ ಎಂಬಾತನಿಗೆ ವೆಬ್ಸೈಟ್ ಒಂದರ ಮೂಲಕ ಮಹಿಳೆಯೊಬ್ಬಳ ಪರಿಚಯವಾಗಿತ್ತು. ಈ ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ದೈಹಿಕ ಸಂಬಂಧ ಕೂಡ ಬೆಳಸಿದ್ದಾರೆ. ಆದರೆ ಆ ವೇಳೆ ಅಭಯ್, ಮಹಿಳೆಗೆ 2500 ರೂಪಾಯಿ ನೀಡಿದ್ದಾನೆ.


ಇದನ್ನೇ ನೆಪವಾಗಿಟ್ಟುಕೊಂಡ ಮಹಿಳೆ ಹಣಕ್ಕಾಗಿ ಆತನನ್ನು ಪೀಡಿಸಲು ಶುರುಮಾಡಿದ್ದಾಳೆ. ಆಗ ಆತ 1500 ರೂಪಾಯಿ ಕೊಡುವುದಾಗಿ ಹೇಳಿದ್ದಾನೆ. ಇದಕ್ಕೆ ಒಪ್ಪದ ಮಹಿಳೆ 50 ಸಾವಿರಕ್ಕೆ ಬೇಡಿಕೆಯಿಟ್ಟಿದ್ದಾಳೆ. ಒಂದು ವೇಳೆ ಹಣ ಕೊಡದಿದ್ದರೆ ಈ ವಿಚಾರವನ್ನು ಆತನ ಪತ್ನಿಗೆ ಹೇಳುವುದಾಗಿ ಬೆದರಿಕೆಯೊಡ್ಡಿದ್ದಾಳೆ. ಇದರಿಂದ ಬೇಸತ್ತ ಅಭಯ್ ಮಹಿಳೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪತ್ನಿಗೆ ಕಾಡಿನಲ್ಲಿ ದೈಹಿಕ ಸಂಬಂಧದ ಆಸೆ ತೋರಿಸಿ ಪತಿ ಮಾಡಿದ್ದೇನು ಗೊತ್ತೇ?