Select Your Language

Notifications

webdunia
webdunia
webdunia
webdunia

ಪಾರ್ಟಿ ನೀಡಿ ವಿಚ್ಛೇಧನವನ್ನು ಸಂಭ್ರಮಿಸಿ, ಮಾಜಿ ಪತ್ನಿಯ ಆಕೃತಿ ಜತೆಗೆ ಫೋಸ್ ಕೊಟ್ಟ ವ್ಯಕ್ತಿ

ಪಾರ್ಟಿ ನೀಡಿ ವಿಚ್ಛೇಧನವನ್ನು ಸಂಭ್ರಮಿಸಿ, ಮಾಜಿ ಪತ್ನಿಯ ಆಕೃತಿ ಜತೆಗೆ ಫೋಸ್ ಕೊಟ್ಟ ವ್ಯಕ್ತಿ

Sampriya

ಹರಿಯಾಣ , ಶುಕ್ರವಾರ, 13 ಡಿಸೆಂಬರ್ 2024 (20:01 IST)
Photo Courtesy X
ಹರಿಯಾಣ: ಹೆಚ್ಚಾಗಿ ಸಾಮಾನ್ಯ ವ್ಯಕ್ತಿಗಳು ತಮ್ಮ ವಿಚ್ಛೇಧನದ ಸುದ್ದಿಯನ್ನು ಖಾಸಗಿಯಾಗಿ ಇಡಲು ಬಯಸುತ್ತಾರೆ. ಆದರೆ ಹರಿಯಾಣದ ವ್ಯಕ್ತಿಯೊಬ್ಬ ವಿಚ್ಛೇಧನದ ಸುದ್ದಿಯನ್ನು ಸಂಭ್ರಮಿಸುವ ಮೂಲಕ ದೇಶದಾದ್ಯಂತ ಸುದ್ದಿಗೆ ಕಾರಣವಾಗಿದ್ದಾನೆ.  

ಹರಿಯಾಣದ ವ್ಯಕ್ತಿಯೊಬ್ಬರು ವಿಚ್ಛೇದನದ ಸಲುವಾಗಿ ದೊಡ್ಡ ಮಟ್ಟದಲ್ಲಿ ಪಾರ್ಟಿ ಆಯೋಜಿಸಿ ಸಂಭ್ರಮಿಸುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಅದಲ್ಲದೆ ಇದರ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದೆ.

ಹರ್ಯಾಣದ ನಿವಾಸಿ ಮಂಜೀತ್ ಅವರು 2020 ರಲ್ಲಿ ಕೋಮಲ್ ಎಂಬಾಕೆಯನ್ನು ಮದುವೆಯಾದರು. ಆದರೆ ಈ ಜೋಡಿ ಮಧ್ಯೆ ಕಾಣಿಸಿಕೊಂಡ ಭಿನ್ನಾಭಿಪ್ರಾಯದಿಂದ ಮೂರು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಮಾಡಲು ಬಯಸಿದರು. ಅದರಂತೆ ವಿಚ್ಛೇಧನದ ಮೂಲಕ ಅವರ ದಾಂಪತ್ಯ ಜೀವನ ಕೊನೆಗೊಂಡಿತು.

ತಮ್ಮ ಬೇರ್ಪಡುವಿಕೆಯನ್ನು ಖಾಸಗಿಯಾಗಿ ಇರಿಸಿಕೊಳ್ಳಲು ಇಷ್ಟಪಡುವ ಅನೇಕರಿಗಿಂತ ಭಿನ್ನವಾಗಿ, ಮಂಜೀತ್ ಈ ಸಂದರ್ಭವನ್ನು ದೊಡ್ಡ ಮಟ್ಟದಲ್ಲಿ ಆಚರಣೆಯೊಂದಿಗೆ ಗುರುತಿಸಲು ನಿರ್ಧರಿಸಿದರು.

ಪಾರ್ಟಿಯಲ್ಲಿ ಮಂಜೀತ್ ಮತ್ತು ಕೋಮಲ್ ಅವರ ಮದುವೆಯ ಫೋಟೋ, ಅವರ ಮದುವೆ ಮತ್ತು ವಿಚ್ಛೇದನದ ದಿನಾಂಕಗಳನ್ನು ಪ್ರಮುಖವಾಗಿ ಪ್ರದರ್ಶಿಸುವ ಪೋಸ್ಟರ್ ಹಾಕಿ, ಸಂಭ್ರಮಿಸಿಲಾಯಿತು. ಸ್ವಾತಂತ್ರ್ಯನಾಗಿದ್ದೇನೆ ಎಂದು ಜೋರಾಗಿ ಕೂಗಿ ಅನೇಕ ಕೇಕ್‌ಗಳನ್ನು ಕಟ್ಟಿ ಮಾಡಿ ಸಂಭ್ರಮಿಸಿದ್ದಾನೆ.

ಅದಲ್ಲದೆ ಹೆಣ್ಣಿನ ಆಕೃತಿಯ ಒಂದು ಗೊಂಬೆಯನ್ನು ಮಾಡಿ ಅದರ ಜತೆ ಪೋಸ್ ನೀಡಿದ್ದಾನೆ. ಈ ಫೋಟೋ, ವಿಡಿಯೋ ಭಾರೀ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆಯಲ್ಲಿ ಪ್ರಿಯಾಂಕ ವಾದ್ರಾ ಚೊಚ್ಚಲ ಭಾಷಣಕ್ಕೆ ಫುಲ್ ಮಾರ್ಕ್ಸ್‌ ಕೊಟ್ಟ ರಾಹುಲ್ ಗಾಂಧಿ