Select Your Language

Notifications

webdunia
webdunia
webdunia
Tuesday, 8 April 2025
webdunia

ವೀರ್ಯ ದಾನ ಮಾಡಿ ಹಣ ಸಂಪಾದಿಸುತ್ತಿದ್ದ ಪತಿ! ಮುಂದೇನಾಯ್ತು?

ವೀರ್ಯಾಣು
ನವದೆಹಲಿ , ಗುರುವಾರ, 7 ಏಪ್ರಿಲ್ 2022 (06:03 IST)
ಹಲವು ವರ್ಷಗಳ ಹಿಂದೆ ವೀರ್ಯ ದಾನ ಮಾಡಿ ಹಣ ಸಂಪಾದಿಸುತ್ತಿದ್ದ ಪತಿಯ ಕುರಿತಾಗಿ ತಿಳಿದು ಬೇಸರಗೊಂಡ ಮಹಿಳೆ, ಆತನಿಂದ ದೂರವಾಗುವ ನಿರ್ಧಾರ ಮಾಡಿರುವ ಘಟನೆಯೊಂದು ಸುದ್ದಿಯಾಗಿದೆ.

ಪತಿ ವೀರ್ಯ ದಾನಿಯಾಗಿದ್ದೇನೆ ಎಂಬ ಸತ್ಯವನ್ನು ಮರೆಮಾಚುವ ನಿರ್ಧಾರ ಆಕೆಗೆ ಇಷ್ಟವಾಗಲಿಲ್ಲ. ಈ ವಿಚಾರವಾಗಿ ಮನನೊಂದ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.

ಈ ಕುರಿತಾಗಿ ಮಾತನಾಡಿದ ಆತ, ನಾನು ಕಾಲೇಜಿನಲ್ಲಿದ್ದಾಗ ವೀರ್ಯ ದಾನಿಯಾಗಿದ್ದೆ. ನಾನು ಮುಖ್ಯವಾಗಿ ಹಣ ಗಳಿಸಲು ಇದನ್ನು ಮಾಡಿದ್ದೆ. ಮಕ್ಕಳಿಗಾಗಿ ಕಷ್ಟಪಡುತ್ತಿರುವ ಜನರಿಗೆ ಸಹಾಯ ಮಾಡಬೇಕೆಂದು ವೀರ್ಯ ದಾನ ಮಾಡಲು ಶುರು ಮಾಡಿದೆ.

ಕಾಲೇಜು ಮುಗಿದ ಬಳಿಕ ವೀರ್ಯಾಣು ದಾನ ಮಾಡುವುದನ್ನು ಕೂಡ ನಿಲ್ಲಿಸಿದೆ. ಆದರೆ, ಕೆಲವು ವರ್ಷಗಳ ನಂತರ ಮತ್ತೆ ಹಣಕಾಸಿನ ಸಮಸ್ಯೆ ಎದುರಾದಾಗ ಮತ್ತೆ ವೀರ್ಯ ದಾನ ಮಾಡಲು ಆರಂಭಿಸಿದೆ. ಈ ವಿಷಯವನ್ನು ನನ್ನ ಹೆಂಡತಿಯಿಂದ ಮುಚ್ಚಿಟ್ಟಿದ್ದೆ.

ನನ್ನ ಗೆಳೆಯರಿಂದ ಆಕೆಗೆ ಈ ವಿಷಯ ತಿಳಿದು ಆಕೆ ಆಘಾತಕ್ಕೊಳಗಾದಳು. ನಾನು ನನ್ನ ಹೆಂಡತಿಗೆ ನಮ್ಮ ಮಕ್ಕಳನ್ನು ಹೊರತುಪಡಿಸಿ ಬೇರೆ ಯಾವುದೇ ಮಕ್ಕಳನ್ನು ಹೊಂದಿಲ್ಲ.

ಆದರೆ ನನ್ನ ಪತ್ನಿ, ನಾನು ನಂಬಿಕೆ ದ್ರೋಹ ಮಾಡಿದ್ದೇನೆ ಎಂಬ ಕಾರಣಕ್ಕೆ ನನ್ನನ್ನು ಬಿಟ್ಟು ಹೋಗಲು ನಿರ್ಧರಿಸಿದ್ದಾಳೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲೂ ಮಾಸ್ಕ್​ಗೆ ಶೀಘ್ರ ಗುಡ್​ ಬೈ