Select Your Language

Notifications

webdunia
webdunia
webdunia
webdunia

ಪತಿ ವಿಚ್ಛೇದನ ಕೊಟ್ಟಿದ್ದು 12 ವರ್ಷವಾದರೂ ಪತ್ನಿಗೆ ಗೊತ್ತೇ ಇರಲಿಲ್ಲ!

ಪತಿ ವಿಚ್ಛೇದನ ಕೊಟ್ಟಿದ್ದು 12 ವರ್ಷವಾದರೂ ಪತ್ನಿಗೆ ಗೊತ್ತೇ ಇರಲಿಲ್ಲ!
ವಾಷಿಂಗ್ಟನ್ , ಮಂಗಳವಾರ, 22 ಫೆಬ್ರವರಿ 2022 (09:30 IST)
ವಾಷಿಂಗ್ಟನ್: ವಿಚ್ಛೇದನವಾಗಿ 12 ವರ್ಷವಾದರೂ ಪತ್ನಿಗೆ ಈ ವಿಚಾರವೇ ಗೊತ್ತಿರಲಿಲ್ಲ! ಹೀಗೊಂದು ವಿಚಿತ್ರ ಘಟನೆ ಅಮೆರಿಕಾದಲ್ಲಿ ನಡೆದಿದೆ.

1978 ರಲ್ಲಿ ಮದುವೆಯಾಗಿದ್ದ ರಚ್ ಪಾಲ್ ಮತ್ತು ಕೇವಾಲ್ ರಾಂಧವ ಎಂಬ ದಂಪತಿ ಮದುವೆಯಾಗಿದ್ದರು. 2009 ರಲ್ಲಿ ವಿಚ್ಛೇದನ ಪಡೆದಿದ್ದರು. ಆದರೆ ನಂತರವೂ ಕಾರ್ಯಕ್ರಮಗಳಲ್ಲಿ ಜೊತೆಯಾಗಿಯೇ ಪಾಲ್ಗೊಳ್ಳುತ್ತಿದ್ದರು. ಪತ್ನಿಗೆ ಮಾತ್ರ ವಿಚ್ಛೇದನದ ವಿಚಾರವೇ ಗೊತ್ತಿರಲಿಲ್ಲ.

ಕಾರಣ, ಪತ್ನಿಯ ಸಹಿಯನ್ನು ಯಾರೋ ಪೋರ್ಜರಿ ಮಾಡಿ ಅಂದು ವಿಚ್ಛೇನ ಪತ್ರಕ್ಕೆ ಸಹಿ ಹಾಕಿದ್ದರು. ಈ ಕಾರಣಕ್ಕೆ ಈಗ ಕೋರ್ಟ್ ವಿಚ್ಛೇದನವನ್ನು ರದ್ದುಗೊಳಿಸಿದೆ. ಅಲ್ಲದೆ, 2011 ರಲ್ಲಿ ಪತಿ ಬೇರೊಂದು ಮದುವೆಯಾಗಿ ಮಗುವೂ ಇದೆ. ಈ ವಿಚಾರವೂ ಪತ್ನಿಗೆ ಗೊತ್ತೇ ಇರಲಿಲ್ಲವಂತೆ!

Share this Story:

Follow Webdunia kannada

ಮುಂದಿನ ಸುದ್ದಿ

ಊಟ ಬಡಿಸಲು ವಿಳಂಬವಾಗಿದ್ದಕ್ಕೆ ಮದುವೆ ಮುರಿದುಕೊಂಡ ವರನ ಮನೆಯವರು