ಹೈದರಾಬಾದ್: ಪತ್ನಿ ಐಶ್ವರ್ಯಾ ರಜನೀಕಾಂತ್ ಜೊತೆಗೆ ಬ್ರೇಕಪ್ ಸುದ್ದಿ ಬಳಿಕ ನಟ ಧನುಷ್ ರೆಸ್ಟೋರೆಂಟ್ ಒಂದರಲ್ಲಿ ಯುವತಿಯೊಬ್ಬರ ಜೊತೆಗೆ ಊಟ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
									
			
			 
 			
 
 			
			                     
							
							
			        							
								
																	ಮೊನ್ನೆಯಷ್ಟೇ ಸಿನಿಮಾ ಶೂಟಿಂಗ್ ಸೆಟ್ ಗೆ ಬಂದ ಮಗನ ಜೊತೆ ಕಳೆದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಧನುಷ್ ಸುದ್ದಿಯಾಗಿದ್ದರು. ಇದೀಗ ಶೂಟಿಂಗ್ ನಿಮಿತ್ತ ಧನುಷ್ ಹೈದರಾಬಾದ್ ಗೆ ಮರಳಿದ್ದಾರೆ.
									
										
								
																	ಈ ನಡುವೆ ರೆಸ್ಟೋರೆಂಟ್ ಒಂದರಲ್ಲಿ ಯುವತಿಯೊಬ್ಬರ ಜೊತೆಗೆ ಊಟ ಮಾಡುತ್ತಿರುವ ಫೋಟೋ ಕಂಡುಬಂದಿದ್ದು, ನೆಟ್ಟಿಗರು ಈ ಯುವತಿ ಯಾರೆಂದು ಕುತೂಹಲ ವ್ಯಕ್ತಪಡಿಸಿದ್ದಾರೆ.