Publish Date: Fri, 04 Dec 2020 (06:53 IST)
Updated Date: Fri, 04 Dec 2020 (06:55 IST)
ವಡೋದರಾ : ಗುಜರಾತ್ ನ ವಡೋದರಾ ಜಿಲ್ಲೆಯಲ್ಲಿ ಕಳೆದ 9 ತಿಂಗಳಿನಿಂದ 14 ವರ್ಷದ ಹುಡುಗಿಯ ಮೇಲೆ ಆಕೆಯ ತಂದೆಯೇ ಅನೇಕ ಬಾರಿ ಮಾನಭಂಗ ಎಸಗಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ಆಟೋ ಚಾಲಕನಾದ ತಂದೆ ಮನೆಯಲ್ಲಿ ಯಾರು ಇಲ್ಲದ ವೇಳೆ ಮಗಳ ಮೇಲೆ ಇಂತಹ ಘೋರ ಕೃತ್ಯ ಎಸಗಿ ಯಾರಿಗಾದರೂ ತಿಳಿಸಿದರೆ ತಾಯಿ ಮತ್ತು ತಂಗಿಯರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ಮಗಳು ಅವಧಿ ತಪ್ಪುತ್ತಿದ್ದ ಹಿನ್ನಲೆಯಲ್ಲಿ ತಾಯಿ ಪ್ರಶ್ನಿಸಿದಾಗ ವಿಚಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ತಾಯಿ ತನ್ನ ಪತಿಯ ನೀಚ ಕೃತ್ಯದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಅವರ ದೂರಿನ ಆಧಾರದ ಮೇಲೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.