Select Your Language

Notifications

webdunia
webdunia
webdunia
webdunia

ಗುಪ್ತಾಂಗಕ್ಕೆ ಕೋಳಿ ರಕ್ತ ಹಚ್ಚಿಕೊಂಡು ಉದ್ಯಮಿ ವಿರುದ್ಧ ಸುಳ್ಳು ರೇಪ್ ಕೇಸ್!

ಗುಪ್ತಾಂಗಕ್ಕೆ ಕೋಳಿ ರಕ್ತ ಹಚ್ಚಿಕೊಂಡು ಉದ್ಯಮಿ ವಿರುದ್ಧ ಸುಳ್ಳು ರೇಪ್ ಕೇಸ್!
ಮುಂಬೈ , ಬುಧವಾರ, 19 ಜುಲೈ 2023 (10:02 IST)
ಮುಂಬೈ : ಮಹಿಳೆಯೊಬ್ಬಳು ಕೋಳಿ ರಕ್ತ ಬಳಸಿಕೊಂಡು 64 ವರ್ಷದ ಉದ್ಯಮಿ ವಿರುದ್ಧ ಸುಳ್ಳು ರೇಪ್ ಕೇಸ್ ದಾಖಲಿಸಿ ಈಗ ಪೊಲೀಸರಿಗೆ ತಗಲಾಕ್ಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

2021ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದಾಗ ಕೇಸ್ ಬೆಳಕಿಗೆ ಬಂದಿದೆ. ವಿವಿಧ ಖಾಸಗಿ ಹುದ್ದೆಗಳಲ್ಲಿರುವ ಮೋನಿಕಾ ಭಗವಾನ್ ಅಲಿಯಾಸ್ ದೇವ್ ಚೌಧರಿ, ಅನಿಲ್ ಚೌಧರಿ ಅಲಿಯಾಸ್ ಆಕಾಶ್, ಲುಬ್ನಾ ವಜೀರ್ ಅಲಿಯಾಸ್ ಸಪ್ನಾ ಆರೋಪಿಗಳಾಗಿದ್ದಾರೆ.

2019ರಲ್ಲಿ ಮೋನಿಕಾ ಮತ್ತು ಆಕೆಯ ಸಹಚರರು ಖಾಸಗಿ ವೀಡಿಯೋ ರೆಕಾರ್ಡ್ ಮಾಡಿದ್ದು, 64ರ ಉದ್ಯಮಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ವೃದ್ಧನ ಬಳಿ ಎರಡು ವರ್ಷಗಳ ಅವಧಿಯಲ್ಲಿ 3.26 ಕೋಟಿ ಹಣ ವಸೂಲಿ ಮಾಡಿದರು. ಇದರಿಂದ ಬೇಸತ್ತಿದ್ದ ಉದ್ಯಮಿ 2021ರಲ್ಲಿ ಮಹಾರಾಷ್ಟ್ರದ ಸಹಾರ್ ಪೊಲೀಸ್ ಠಾಣೆಯಲ್ಲಿ ಮೋನಿಕಾ ಮತ್ತು ಆಕೆಯ ಸಹಚರರು ವಸೂಲಿ ಮಾಡಿರುವುದಾಗಿ ದೂರು ದಾಖಲಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ : ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ