Publish Date: Thu, 23 Mar 2023 (18:00 IST)
Updated Date: Thu, 23 Mar 2023 (17:47 IST)
ಇಂದು ರಾಜ್ಯದಲ್ಲಿ ಹೊಸ ತಡುಕು ಆಚರಣೆ ಮಾಡಲಾಗ್ತಿದೆ. ಇದೀಗ ರಾಜಕಾರಣಿಗಳು ಮತದಾರರನ್ನು ಸೆಳೆಯಲು
ಹಬ್ಬಕ್ಕೆ ಕೋಳಿ ಹಂಚಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಕೋಳಿಗಳನ್ನು ಹಂಚಿಕೆ ಮಾಡಲಾಗಿದೆ. ಪ್ರತಿ ಮನೆ ಮನೆಗೂ ಕೋಳಿಗಳನ್ನು ವಿತರಿಸಲಾಗಿದೆ. ಶಾಸಕ ಸತೀಶ್ ರೆಡ್ಡಿ ಬಲಗೈ ಬಂಟ,ಮಾಜಿ ಉಪಮೇಯರ್ ಆಗಿದ್ದ ರಾಮ್ ಮೋಹನ್ ರಾಜು ಕೋಳಿಗಳನ್ನು ಹಂಚಿದ್ದಾರೆ. ಕ್ಯೂನಲ್ಲಿ ನಿಂತು ಮತದಾರರು ಕೋಳಿಯನ್ನು ಪಡೆದಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳು ಗಿಫ್ಟ್ಗಳ ಮೇಲೆ ಗಿಫ್ಟ್ಗಳನ್ನು ಹಂಚುತ್ತಿದ್ದಾರೆ.