Select Your Language

Notifications

webdunia
webdunia
webdunia
webdunia

1,100 ಕೋಳಿಗಳನ್ನು ಹೆದರಿಸಿ ಕೊಂದಿದ್ದ ವ್ಯಕ್ತಿಗೆ ಜೈಲು ಶಿಕ್ಷೆ

1,100 ಕೋಳಿಗಳನ್ನು ಹೆದರಿಸಿ ಕೊಂದಿದ್ದ ವ್ಯಕ್ತಿಗೆ ಜೈಲು ಶಿಕ್ಷೆ
ಬೀಜಿಂಗ್ , ಮಂಗಳವಾರ, 11 ಏಪ್ರಿಲ್ 2023 (11:14 IST)
ಬೀಜಿಂಗ್ : ತನ್ನ ನೆರೆ ಮನೆಯಾತನ ವಿರುದ್ಧ ಸೇಡು ತೀರಿಸಿಕೊಳ್ಳಲು 1,100 ಕೋಳಿಗಳನ್ನು ಹೆದರಿಸಿ ಸಾಯಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ಜೈಲು ಶಿಕ್ಷೆ ವಿಧಿಸಿದ ಘಟನೆ ಚೀನಾದಲ್ಲಿ ನಡೆದಿದೆ.

ಗು ಎಂಬಾತ ಆರೋಪಿ. ಗುಗೆ ಸೇರಿದ್ದ ಮರಗಳನ್ನು ನೆರೆಮನೆಯ ಝಾಂಗ್ ಅನುಮತಿಯಿಲ್ಲದೇ ಕತ್ತರಿಸಿದ್ದ. ಈ ಹಿನ್ನೆಲೆಯಲ್ಲಿ ಕೋಪಗೊಂಡ ಗು, ತನ್ನ ನೆರೆಮನೆಯ ಝಾಂಗ್ನ ಕೋಳಿ ಫಾರ್ಮ್ಗೆ ನುಗ್ಗಿದ್ದಾನೆ. ಅಲ್ಲಿ ಬ್ಯಾಟರಿ ದೀಪಗಳನ್ನು ಬಳಸಿ ಕೋಳಿಗಳನ್ನು ಭಯಭೀತಗೊಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಅಲ್ಲಿದ್ದ 460 ಕೋಳಿಗಳು ಹೆದರಿ ಮೃತಪಟ್ಟಿದೆ.

ಘಟನೆಯ ನಂತರ ಗುನನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ 3,000 ಯುವಾನ್ (35,734 ರೂ.)ಯನ್ನು ದಂಡವಾಗಿ ಪಾವತಿಸಲು ಸೂಚಿಸಲಾಯಿತು. ಇದರಿಂದ ಸಿಟ್ಟಿಗೆದ್ದ ಗೂ, ಝಾಂಗ್ ವಿರುದ್ಧ ಸೇಡು ತೀರಿಸಿಕೊಳ್ಳಲು ಯೋಚಿಸಿದ್ದಾನೆ. ಅದರಂತೆ ಆತ 2ನೇ ಬಾರಿಗೆ ಕೋಳಿ ಫಾರ್ಮ್ಗೆ ಹೋಗಿ ಅಲ್ಲಿದ್ದ 640 ಕೋಳಿಗಳನ್ನು ಕೊಂದಿದ್ದಾನೆ.

ಒಟ್ಟಾರೆಯಾಗಿ 1,100 ಕೋಳಿಗಳು ಮೃತಪಟ್ಟಿದ್ದು, ಅವೆಲ್ಲವೂ ಸುಮಾರು 13,840 ಯುವಾನ್ (ರೂ. 1,64,855) ಮೌಲ್ಯದ್ದಾಗಿವೆ ಎಂದು ಪೊಲೀಸರು ಅಂದಾಜಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಗಳು ಅಮೆರಿಕ ಅವಲಂಬನೆ ಬಿಡಬೇಕು : ಎಮ್ಯಾನುಯೆಲ್ ಮ್ಯಾಕ್ರನ್