Select Your Language

Notifications

webdunia
webdunia
webdunia
webdunia

ನೊಬೆಲ್ ವಿಜೇತ ಅಲೆಸ್ ಬಿಲಿಯಾಟ್ಸ್ಕಿಗೆ ಜೈಲು ಶಿಕ್ಷೆ

ನೊಬೆಲ್ ವಿಜೇತ ಅಲೆಸ್ ಬಿಲಿಯಾಟ್ಸ್ಕಿಗೆ ಜೈಲು ಶಿಕ್ಷೆ
ಮಿನ್ಸ್ಕ್ , ಶನಿವಾರ, 4 ಮಾರ್ಚ್ 2023 (10:15 IST)
ಮಿನ್ಸ್ಕ್ : ಬೆಲಾರಸ್ನ ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ ನೊಬೆಲ್ ಶಾಂತಿ ವಿಜೇತ ಅಲೆಸ್ ಬಿಲಿಯಾಟ್ಸ್ಕಿಗೆ ಬೆಲರಸ್ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
 
ಬಿಲಿಯಾಟ್ಸ್ಕಿ ಅವರು 2020ರ ಚುನಾವಣೆಯ ಸಂದರ್ಭ ಬೃಹತ್ ಪ್ರತಿಭಟನೆ ನಡೆಸಿದ್ದು, ಅವರ ಇಬ್ಬರು ಸಹಚರರೊಂದಿಗೆ ಬಂಧಿಸಲಾಗಿತ್ತು. ಪ್ರತಿಭಟನೆ ಹಾಗೂ ಇತರ ಅಪರಾಧಗಳಿಗೆ ಹಣಕಾಸು ಒದಗಿಸಿರುವುದಕ್ಕೆ 60 ವರ್ಷದ ಬಿಲಿಯಾಟ್ಸ್ಕಿಗೆ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 

ಕಳೆದ ವರ್ಷ ಅಕ್ಟೋಬರ್ನಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಮೇಲಿನ ಕೆಲಸಕ್ಕಾಗಿ ಬಿಲಿಯಾಟ್ಸ್ಕಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಶಾಸಕರ ಬೇನಾಮಿ ಆಸ್ತಿ ಮೇಲೂ ದಾಳಿ ಸಾಧ್ಯತೆ