Publish Date: Fri, 20 Jan 2023 (14:19 IST)
Updated Date: Fri, 20 Jan 2023 (15:53 IST)
ಬೆಂಗಳೂರು : ತನಿಖೆ ಮಾಡಿದ್ರೆ ಅನೇಕ ಕಾಂಗ್ರೆಸ್ಸಿಗರು ಜೈಲಿಗೆ ಹೋಗಬೇಕಾಗುವ ಸಾಧ್ಯತೆ ಇದೆ. ಅದಕ್ಕಾಗಿ ಹೊಸ ಜೈಲನ್ನೇ ತೆರೆಯಬೇಕಾಗುತ್ತದೆ ಅಂತಾ ಗೃಹಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.
ನಾವು ಅಧಿಕಾರಕ್ಕೆ ಬಂದ್ರೆ ಬಿಜೆಪಿಯವರನ್ನ ಜೈಲಿಗೆ ಕಳಿಸ್ತೀವಿ ಅನ್ನೋ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ಒಬ್ಬ ವಿಪಕ್ಷ ನಾಯಕನಾಗಿ ಹರಿಪ್ರಸಾದ್ ಸಿಲ್ಲಿ ಸ್ಟೇಟ್ಮೆಂಟ್ ನೀಡಿದ್ದಾರೆ ಅಂತಾ ವಾಗ್ದಾಳಿ ನಡೆಸಿದ್ರು. ಕಾಂಗ್ರೆಸ್ನಲ್ಲಿರುವ ಅನೇಕರು ಜೈಲಿನ ಒಳಗಿದ್ದಾರೆ.