Select Your Language

Notifications

webdunia
webdunia
webdunia
webdunia

ಹೆಂಡತಿಯ ಮೇಲಿನ ಸಿಟ್ಟಿಗೆ ತನ್ನ ಎರಡು ವರ್ಷದ ಮಗಳ ಮೇಲೆಯೇ ಅತ್ಯಾಚಾರ ಮಾಡಿದ ಕ್ರೂರ ಅಪ್ಪ

ಹೆಂಡತಿಯ ಮೇಲಿನ ಸಿಟ್ಟಿಗೆ ತನ್ನ ಎರಡು ವರ್ಷದ ಮಗಳ ಮೇಲೆಯೇ ಅತ್ಯಾಚಾರ ಮಾಡಿದ ಕ್ರೂರ ಅಪ್ಪ
ಹರಿಯಾಣ , ಶನಿವಾರ, 4 ಸೆಪ್ಟಂಬರ್ 2021 (09:30 IST)
ಹರಿಯಾಣ : ಎರಡು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಹರಿಯಾಣದ ಗುರುಗ್ರಾಮದಲ್ಲಿ ಕೇಳಿಬಂದಿದೆ. ಗುರುಗ್ರಾಮದ ಪಟೌಡಿ ಏರಿಯಾದಲ್ಲಿ ಅಪ್ಪನೇ ಮಗಳ ಮೇಲೆ ಈ ಕೃತ್ಯವನ್ನು ಮಾಡಿದ್ದಾನೆ ಎನ್ನಲಾಗಿದೆ. ಘಟನೆ ಆಗಸ್ಟ್ 28ರಂದು ನಡೆದಿದ್ದು, ಸೆಪ್ಟೆಂಬರ್ ಎರಡಕ್ಕೆ ಬೆಳಕಿಗೆ ಬಂದಿದೆ. ಈಗಾಗಲೇ ಪೊಲೀಸರು ಆರೋಪಿ ಅಪ್ಪನ ವಿರುದ್ಧ ಪ್ರಥಮ ವರ್ತಮಾನ ವರದಿ (ಎಫ್ಐಆರ್) ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಗಂಡ - ಹೆಂಡತಿ ಹಸುಗೂಸನ್ನು ಕರೆದುಕೊಂಡು ಬಿಹಾರದಿಂದ ಹರಿಯಾಣದ ಗುರುಗ್ರಾಮಕ್ಕೆ ವಲಸೆ ಬಂದಿತ್ತು. ನಂತರ ಅಮ್ಮ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆ, ಗಂಡ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಇಬ್ಬರ ನಡುವೆಯೂ ಆಗಾಗ ವಾಗ್ವಾದ ನಡೆಯುತ್ತಿತ್ತು, ಅದರ ಬೆನ್ನಲ್ಲೇ ಇದೇ ಆಗಸ್ಟ್ ತಿಂಗಳಲ್ಲಿ, ಹೆಂಡತಿ ಮತ್ತೊಂದು ಗಂಡಸಿನ ಜತೆ ಮದುವೆಯಾಗಿದ್ದರು. ಈ ಮೂಲಕ ಸುಮಾರು ಮೂರು ವರ್ಷಗಳ ಕಾಲದ ಸಂಸಾರ ಅಂತ್ಯವಾಗಿತ್ತು.
ಆಗಸ್ಟ್ 28ರಂದು, ಹಳೆಯ ಗಂಡ ಹೆಂಡತಿಯ ಮನೆಗೆ ನುಗ್ಗಿದ್ದಾನೆ. ತಾಯಿ - ಮಗು ಮಲಗಿಕೊಂಡಿದ್ದಾಗ ಬಂದು ದಾಂಧಲೆ ಮಾಡಿದ ಗಂಡ, ಒಳಗಿಂದ ಮನೆಯ ಬೀಗ ಹಾಕಿಕೊಂಡಿದ್ದಾನೆ. ಪ್ರತಿರೋಧ ವ್ಯಕ್ತಪಡಿಸಲು ಯತ್ನಿಸಿದರಾದರೂ, ಆಕೆಗೆ ಸಾಧ್ಯವಾಗಿಲ್ಲ. ಅಕ್ಕಪಕ್ಕದವರು ಬಂದು ಬಾಗಿಲು ತಟ್ಟಿದರೂ ಆತ ಬಾಗಿಲನ್ನು ತೆರೆಯಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಾನು ನನ್ನ ಮಗಳು ಮಲಗಿದ್ದಾಗ ಗಂಡ ಮನೆಗೆ ಬಂದ. ಬಂದವನೇ ಮನೆಯ ಒಳಗಿನಿಂದ ಬೀಗ ಹಾಕಿ, ಕೀಲಿ ತೆಗೆದಿಟ್ಟುಕೊಂಡ. ಜತೆಗೆ ಮಗಳನ್ನು ರೂಮಿನೊಳಗೆ ಹಾಕಿ ತಾನೂ ಒಳಗೆ ಹೋದ. ನಾನು ಎಷ್ಟು ಗೋಗರೆದರೂ ಬಾಗಿಲು ತೆಗೆಯಲಿಲ್ಲ. ಕೆಲ ಹೊತ್ತಿನ ಬಳಿಕ ಬಾಗಿಲನ್ನು ತೆರೆದ ಅವನು, ಯಾರಿಗಾದರೂ ಹೇಳಿದರೆ ಸರಿ ಇರುವುದಿಲ್ಲ, ಸಾಯಿಸುತ್ತೇನೆ ಎಂದು ಬೆದರಿಸಿದ. ನನ್ನ ಮಗಳು ಅಳುತ್ತ ಇದ್ದಳು. ಆಕೆ ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದಳು. ಅವಳ ಗುಪ್ತಾಂಗಗಳ ಮೇಲೆ ಗಾಯಗಳಾಗಿದ್ದು, ರಕ್ತಸ್ರಾವವಾಗುತ್ತಿತ್ತು, ಎಂದು ಹೆಂಡತಿ ದೂರಿನಲ್ಲಿ ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನಾವಳಿಗಳ ನಂತರ ಹೆಂಡತಿ ಆಕೆಯ ಸಂಬಂಧಿಕರೊಬ್ಬರಿಗೆ ಕರೆ ಮಾಡಿ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾರೆ. ಇದಾದ ಬೆನ್ನಲ್ಲೇ ಸಂಬಂಧಿಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಮಂಗಳವಾರ ಪೊಲೀಸರು ಈ ಸಂಬಂಧ ಅಧಿಕೃತ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಗ್ ಖರೀದಿಯಲ್ಲಿ ರೋಹಿಣಿ ಸಿಂಧೂರಿ ಭ್ರಷ್ಟಾಚಾರ: ಸಾರಾ ಮಹೇಶ್ ಆರೋಪ