Select Your Language

Notifications

webdunia
webdunia
webdunia
webdunia

ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅವಿತು ಕಾಬೂಲ್‌ನಿಂದ ದೆಹಲಿಗೆ ಬಂದ ಬಾಲಕ

Kam Air passenger Plane, Afghanistan Boy Plane Incident, Kabul To India Plane

Sampriya

ನವದೆಹಲಿ , ಮಂಗಳವಾರ, 23 ಸೆಪ್ಟಂಬರ್ 2025 (16:30 IST)
Photo Credit X
ಅಫ್ಘಾನಿಸ್ತಾನದ 13 ವರ್ಷದ ಹುಡುಗನೊಬ್ಬ ವಿಮಾನದ ಲ್ಯಾಂಡಿಂಗ್ ಗೇರ್  ಕಂಪಾರ್ಟ್‌ಮೆಂಟ್‌ನಲ್ಲಿ ಅಡಗಿಕೊಂಡು ಕಾಬೂಲ್‌ನಿಂದ ದೆಹಲಿಗೆ ಬಂದಿಳಿದ ಶಾಕಿಂಗ್ ಸಂಗತಿ ವರದಿಯಾಗಿದೆ. 

ಉತ್ತರ ಅಫ್ಘಾನಿಸ್ತಾನದ ಕುಂದುಜ್ ನಗರದ ಹದಿಹರೆಯದ ಯುವಕ ಸೋಮವಾರ ವಿಮಾನ ಲ್ಯಾಂಡ್ ಆದ ನಂತರ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಅಲೆದಾಡುತ್ತಿರುವುದು ಕಂಡುಬಂದಿದೆ. ಗಮನಿಸಿದ ಭಾರತೀಯ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಅದೇ ವಿಮಾನದಲ್ಲಿ ಕಾಬೂಲ್‌ಗೆ ವಾಪಸ್ ಕಳುಹಿಸುವ ಮುನ್ನ ಹಲವು ಗಂಟೆಗಳ ಕಾಲ ಪ್ರಶ್ನಿಸಿದ್ದರು.

ಬಾಲಕ ಈ ವೇಳೆ ತಾನು ಹೇಗೆ ಪ್ರಯಾಣ ಬೆಳೆಸಿದ್ದೇನೆಂಬ ಆಘಾತಕಾರಿ ವಿಚಾರವನ್ನು ಹಂಚಿಕೊಂಡಿದ್ದಾನೆ. 

ವಿಮಾನದ ಹಿಂಭಾಗದ ಸೆಂಟ್ರಲ್ ಲ್ಯಾಂಡಿಂಗ್ ಗೇರ್ ಕಂಪಾರ್ಟ್‌ಮೆಂಟ್‌ನಲ್ಲಿ ತನ್ನನ್ನು ತಾನು ಅಡಗಿಸಿಕೊಂಡು ಕಾಬೂಲ್‌ನಿಂದ ದೆಹಲಿಗೆ ಬಂದಿರುವುದಾಗಿ ಹೇಳಿಕೊಂಡಿದ್ದಾನೆ. 

ಹೆಚ್ಚಿನ ಸುರಕ್ಷತಾ ತಪಾಸಣೆ ನಡೆಸಿದ ನಂತರ ಏರ್‌ಲೈನ್ ಸಿಬ್ಬಂದಿಗೆ ಸಣ್ಣ ಕೆಂಪು ಬಣ್ಣದ ಆಡಿಯೊ ಸ್ಪೀಕರ್‌ ಕೂಡ ಕಂಡುಬಂದಿದೆ.

13 ವರ್ಷದ ಯುವಕ ಇರಾನ್‌ಗೆ ಪ್ರಯಾಣಿಸಲು ಬಯಸಿದ್ದನು ಮತ್ತು ಅವನು ಪ್ರವೇಶಿಸಿದ ವಿಮಾನವು ಟೆಹ್ರಾನ್‌ಗೆ ಅಲ್ಲ, ದೆಹಲಿಗೆ ಹೊರಟಿದೆ ಎಂದು ತಿಳಿದಿರಲಿಲ್ಲ ಎಂದು ತಿಳಿದುಬಂದಿದೆ.

ಪತ್ರಿಕೆಯ ಪ್ರಕಾರ, ಹುಡುಗ ಕಾಬೂಲ್ ವಿಮಾನ ನಿಲ್ದಾಣಕ್ಕೆ ನುಸುಳಿದನು, ಪ್ರಯಾಣಿಕರ ಗುಂಪನ್ನು ಹಿಂಬಾಲಿಸಿದನು ಮತ್ತು ವಿಮಾನದ ಹಿಂಬದಿಯ ಚಕ್ರದ ಬದಿಯಲ್ಲಿ ಕೂತಿದ್ದಾನೆ. ಅವನು ತನ್ನೊಂದಿಗೆ ಕೆಂಪು ಬಣ್ಣದ ಸ್ಪೀಕರ್ ಅನ್ನು ಮಾತ್ರ ಹೊಂದಿದ್ದನು.


Share this Story:

Follow Webdunia kannada

ಮುಂದಿನ ಸುದ್ದಿ

ವಿಧ್ಯುಕ್ತವಾಗಿ ದಸರಾಗೆ ಚಾಲನೆ ಸಿಕ್ಕ ಮರುದಿನವೇ ಚಾಮುಂಡಿಬೆಟ್ಟದಲ್ಲಿ ಸೂತಕದ ಛಾಯೆ, ಏನಾಯಿತು ಗೊತ್ತಾ