Select Your Language

Notifications

webdunia
webdunia
webdunia
webdunia

ಮನೆಗೆಲಸ ಮಾಡುತ್ತಿದ್ದ ಅಪ್ರಾಪ್ತೆಯ ಶೀಲ ಕೆಡಿಸಿದ ಸರ್ಕಾರಿ ಅಧಿಕಾರಿಯ ಮಾವ

ಮನೆಗೆಲಸ ಮಾಡುತ್ತಿದ್ದ ಅಪ್ರಾಪ್ತೆಯ ಶೀಲ ಕೆಡಿಸಿದ ಸರ್ಕಾರಿ ಅಧಿಕಾರಿಯ ಮಾವ
ಭುವನೇಶ್ವರ , ಭಾನುವಾರ, 8 ನವೆಂಬರ್ 2020 (09:57 IST)
ಭುವನೇಶ್ವರ : ಒಡಿಶಾದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರ 85 ವರ್ಷದ ಮಾವ ಮನೆ ಕೆಲಸ ಮಾಡುತ್ತಿದ್ದ 15 ವರ್ಷದ ಬುಡಕಟ್ಟು ಜನಾಂಗದ ಹುಡುಗಿಯ ಮೇಲೆ ಮಾನಭಂಗ ಎಸಗಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಸಂತ್ರಸ್ತೆ ಸುಮಾರು 6 ತಿಂಗಳಕಾಲ ಅಧಿಕಾರಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಅಧಿಕಾರಿಯ ಮಾವ ಇಂತಹ ನೀಚ ಕೃತ್ಯ ಎಸಗಿದ್ದಾನೆ. ಮತ್ತು ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದಾನೆ.  ಈ ಬಗ್ಗೆ ಹುಡುಗಿ ತನ್ನ ತಾಯಿಯ ಬಳಿ ಹೇಳಿದ್ದು, ತಾಯಿ ಪೊಲೀಸರನ್ನು ಸಂಪರ್ಕಿಸಿದಾಗ ವಿಚಾರ ಬೆಳಕಿಗೆ ಬಂದಿದೆ.

ಅಪ್ರಾಪ್ತೆ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡಿದ್ದಕ್ಕೆ ಈ ಬಗ್ಗೆ ಪೊಲೀಸರು ಅಧಿಕಾರಿಯ ವಿರುದ್ಧ  ದೂರು ದಾಖಲಿಸಿದ್ದಾರೆ. ಮತ್ಯು ಮಾವನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.ಹಾಗೂ  ಆರೋಪಿಗಳಿಬ್ಬರು ಪರಾರಿಯಾದ ಹಿನ್ನಲೆಯಲ್ಲಿ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನನಾಂಗದ ಸೋಂಕಿಗೆ ತುತ್ತಾದ ಪತ್ನಿಗೆ ಪತಿ ಮಾಡಿದ್ದೇನು ಗೊತ್ತಾ?