Publish Date: Mon, 26 Oct 2020 (11:35 IST)
Updated Date: Mon, 26 Oct 2020 (11:37 IST)
ಒಡಿಶಾ : 13 ವರ್ಷದ ಹುಡುಗಿಯ ಮೇಲೆ ನಾಲ್ವರು ಪೊಲೀಸ್ ಅಧಿಕಾರಿಗಳು ಸೇರಿ ಮಾನಭಂಗ ಎಸಗಿದ್ದಲ್ಲದೇ ಇದರ ಪರಿಣಾಮ ಗರ್ಭವತಿಯಾದ ಆಕೆಗೆ ಗರ್ಭಪಾತ ಮಾಡಿಸಿದ ಘಟನೆ ಒಡಿಶಾದ ರೂರ್ಕೆಲಾದಲ್ಲಿ ನಡೆದಿದೆ.
ಹುಡುಗಿಯ ತಾಯಿ ಮಗಳನ್ನು ನೋಡಿಕೊಳ್ಳಲು ಆಗದ ಕಾರಣ ಚಿಲ್ಡ್ರೆರೆನ್ ಹೋಮ್ ಗೆ ಕಳುಹಿಸಿದ್ದಾಳೆ. ಆದರೆ ಹುಡುಗಿ ಅಲ್ಲಿಂದ ತಪ್ಪಿಸಿಕೊಂಡಾಗ ಪೊಲೀಸರ ಕೈಗೆ ಸಿಕ್ಕಿದ್ದಾಳೆ. ಆಗ ಠಾಣೆಗೆ ಕರೆದೊಯ್ದ ಪೊಲೀಸರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದರ ಪರಿಣಾಮ ಆಕೆ ಗರ್ಭವತಿಯಾಗಿದ್ದು, ಆಕೆಗೆ ಗರ್ಭಪಾತ ಮಾಡಿಸಿದ್ದಾರೆ. ಇದೀಗ ಆಕೆ ಮತ್ತೆ ಚಿಲ್ಡರೆನ್ ಹೋಮ್ ನಿಂದ ತಪ್ಪಿಸಿಕೊಂಡಿದ್ದು, ಈ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎನ್ನಲಾಗಿದೆ. ಹಾಗೇ ಅಕ್ರಮ ಗರ್ಭಪಾತ ಮಾಡಿದ ಆರೋಪದ ಮೇಲೆ ವೈದ್ಯನನ್ನು ಬಂಧಿಸಲಾಗಿದೆ ಎನ್ನಲಾಗಿದೆ.