Select Your Language

Notifications

webdunia
webdunia
webdunia
webdunia

ಭಾರತಕ್ಕೆ 6ಜಿ ನೆಟ್‌ವರ್ಕ್ : ನರೇಂದ್ರ ಮೋದಿ

ಭಾರತಕ್ಕೆ 6ಜಿ ನೆಟ್‌ವರ್ಕ್ : ನರೇಂದ್ರ ಮೋದಿ
ನವದೆಹಲಿ , ಬುಧವಾರ, 18 ಮೇ 2022 (09:07 IST)
ನವದೆಹಲಿ : 2030ರ ವೇಳೆಗೆ ಅಂದರೆ ಈ ದಶಕದ ಅಂತ್ಯದಲ್ಲಿ ದೇಶಕ್ಕೆ 6ಜಿ ತಂತ್ರಜ್ಞಾನ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಬೆಳ್ಳಿಹಬ್ಬ ಸಮಾರಂಭದಲ್ಲಿ ಮಾತನಾಡಿದ ಮೋದಿ, ದೇಶದಲ್ಲಿ ಟೆಲಿಡೆನ್ಸಿಟಿ ಹಾಗೂ ಇಂಟರ್ನೆಟ್ ಬಳಕೆಯನ್ನು ವೇಗವಾಗಿ ವಿಸ್ತರಿಸಲಾಗುತ್ತಿದೆ. 21ನೇ ಶತಮಾನದಲ್ಲಿ ಈ ಸಂಪರ್ಕವು ದೇಶದ ಪ್ರಗತಿಯನ್ನು ನಿರ್ಧರಿಸುತ್ತದೆ.

ಈ ದಶಕದ ಅಂತ್ಯದ ವೇಳೆಗೆ ನಾವು 6ಉ ನೆಟ್ವರ್ಕ್ ಸೇವೆ ಪ್ರಾರಂಭಿಸಲು ಸಾಧ್ಯವಾಗುತ್ತದೆ. ಈಗಾಗಲೇ ನಮ್ಮ ಕಾರ್ಯಪಡೆ 6ಜಿ ಹೊರತರುವ ಕೆಲಸ ಪ್ರಾರಂಭಿಸಿದೆ ಎಂದು ಅವರು ಭರವಸೆ ನೀಡಿದ್ದಾರೆ. 

3ಉ ಹಾಗೂ 4ಉ ನೆಟ್ವರ್ಕ್ ಸೇವೆ ಚಾಲ್ತಿಯಲ್ಲಿದ್ದು, ಕೆಲವೇ ತಿಂಗಳಲ್ಲಿ 5ಜಿ ಸೇವೆ ಸಹ ಲಭ್ಯವಾಗಲಿದೆ. 5ಉ ನೆಟ್ವರ್ಕ್ ಸೇವೆ ಚಾಲನೆಯಿಂದ ದೇಶದ ಆರ್ಥಿಕತೆಗೆ 450 ಬಿಲಿಯನ್ ಡಾಲರ್ (ಅಂದಾಜು 3,492 ಕೋಟಿ ರೂ.) ಆದಾಯ ದೊರೆಯಲಿದೆ.

ಇದು ಇಂಟರ್ನೆಟ್ ವೇಗವನ್ನು ಮಾತ್ರವಲ್ಲದೆ ಅಭಿವೃದ್ಧಿಯನ್ನೂ ಹೆಚ್ಚಿಸುತ್ತದೆ. ಜೊತೆಗೆ ಜೀವನ ಮತ್ತು ವ್ಯವಹಾರವನ್ನು ಸುಲಭಗೊಳಿಸುತ್ತದೆ ಎಂದು ಹೇಳಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಮಾವಿನ ಗೊರಟೆ ಎಸೆದದ್ದೇ ತಪ್ಪಾಯ್ತ? ಸಹಪಾಠಿ ಚಾಕುವಿನಿಂದ ಬಾಲಕ!