Publish Date: Thu, 07 Dec 2023 (17:20 IST)
Updated Date: Thu, 07 Dec 2023 (17:52 IST)
ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ 48 ಗಂಟೆಗಳಲ್ಲಿ ಹಲವು ಮಕ್ಕಳು ನಾಪತ್ತೆಯಾಗಿದ್ದಾರೆ. ಕಾಣೆಯಾದ ಎಲ್ಲಾ ಆರು ಮಕ್ಕಳು 12 ರಿಂದ 15 ವರ್ಷದೊಳಗಿನವರು. ಮಕ್ಕಳು ಏಕಾಏಕಿ ನಾಪತ್ತೆಯಾಗುತ್ತಿರುವುದರಿಂದ ಪೋಷಕರು ಆತಂಕಗೊಂಡಿದ್ದಾರೆ. ಕಾಣೆಯಾದ ತಮ್ಮ ಮಕ್ಕಳನ್ನು ಅಪಹರಿಸಲಾಗಿದೆ ಎಂದು ಈ ಪೋಷಕರು ದೂರಿದ್ದು ಪೊಲೀಸರು ಜಾಲವನ್ನು ಬೀಸಿದ್ದಾರೆ.