ಹೈದರಾಬಾದ್: ಮೂರನೇ ಮಗು ಮಾಡಿಕೊಳ್ಳುವವರಿಗೆ 50 ಸಾವಿರ ರೂ. ನಗದು, ಹಸು ಗಿಫ್ಟ್ ನೀಡುವ ಭರ್ಜರಿ ಆಫರ್ ನೀಡಲಾಗಿದೆ. ಎಲ್ಲಿ, ಏನು ಎಂದು ಈ ಸುದ್ದಿ ಓದಿ.
ಇತ್ತೀಚೆಗಿನ ದಿನಗಳಲ್ಲಿ ಮಠಾಧೀಶರು ಮಾತ್ರವಲ್ಲ, ಜನಸಂಖ್ಯೆ ಹೆಚ್ಚಳವಾಗಬೇಕೆಂದು ರಾಜಕಾರಣಿಗಳೂ ಆಗ್ರಹಿಸುತ್ತಿದ್ದಾರೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕಾರಣಕ್ಕೆ ರಾಜಕಾರಣಿಗಳೂ ಈಗ ಮೂರು ಮಕ್ಕಳನ್ನು ಮಾಡಿಕೊಳ್ಳುವ ಬಗ್ಗೆ ಸಲಹೆ ನೀಡುತ್ತಿದ್ದಾರೆ.
ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಈಗಾಗಲೇ ಹಲವು ಬಾರಿ ಈ ಬಗ್ಗೆ ಮಾತನಾಡಿದ್ದಾರೆ. ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅವರ ಪಕ್ಷದ ಸಂಸದರು ಮೂರು ಮಕ್ಕಳನ್ನು ಮಾಡಿಕೊಳ್ಳುವ ತಮ್ಮ ರಾಜ್ಯದ ದಂಪತಿಗಳಿಗೆ ಭರ್ಜರಿ ಆಫರ್ ನೀಡುವುದಾಗಿ ಹೇಳಿದ್ದಾರೆ.
ಆಂಧ್ರಪ್ರದೇಶದ ಟಿಟಿಡಿ ಸಂಸದ ಕಾಳಿಸೆಟ್ಟಿ ಅಪ್ಪಲನಾಯ್ಡು ಈ ಆಫರ್ ನೀಡಿದ್ದಾರೆ. ಮೂರನೇ ಮಗುವಿಗೆ ಜನ್ಮ ನೀಡುವ ಮಹಿಳೆಗೆ ಪ್ರೋತ್ಸಾಹ ಧನವಾಗಿ 50 ಸಾವಿರ ರೂ. ಮತ್ತು ಹಸು ನೀಡುವುದಾಗಿ ಆಫರ್ ನೀಡಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಅವರು ಇಂತಹದ್ದೊಂದು ಆಫರ್ ನೀಡಿದ್ದಾರೆ. ಸಂಸದರ ಹೇಳಿಕೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.