Select Your Language

Notifications

webdunia
webdunia
webdunia
Wednesday, 16 April 2025
webdunia

ಮಹಿಳೆಯೊಂದಿಗೆ 29ರ ಯುವಕ ರೊಮ್ಯಾನ್ಸ್ : ಮದುವೆ ಎಂದಿದ್ದೇ ತಡ ಯುವಕ ಎಸ್ಕೇಪ್!

ನವದೆಹಲಿ
ನವದೆಹಲಿ , ಬುಧವಾರ, 27 ಜುಲೈ 2022 (11:46 IST)
ನವದೆಹಲಿ : ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ವಿದೇಶಿ ಮಹಿಳೆಯೊಂದಿಗೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ ಯುವಕ ಮದುವೆ ವಿಷಯ ಪ್ರಸ್ತಾಪಿಸಿದ ಕೂಡಲೇ ಮಹಿಳೆಯ ನಂಬರ್ ಬ್ಲಾಕ್ ಮಾಡಿ ಎಸ್ಕೇಪ್ ಆಗಿದ್ದಾನೆ.

ದೆಹಲಿಯ ಸಮೀಪದಲ್ಲೇ ಇರುವ ಗುರುಗ್ರಾಮದಲ್ಲಿ ತೈವಾನ್ ಮೂಲದ ಮಹಿಳೆಯೊಂದಿಗೆ ರವೀಂದ್ರ ವಿಶ್ವಕರ್ಮ ಎಂಬ ವ್ಯಕ್ತಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಮದುವೆ ವಿಷಯ ಪ್ರಸ್ತಾಪಿಸಿದಾಗ ಆಕೆಯ ನಂಬರ್ ಬ್ಲಾಕ್ ಮಾಡಿ, ಎಸ್ಕೇಪ್ ಆಗಿದ್ದಾನೆ.

ಇದರಿಂದ ಮದುವೆಯ ನೆಪದಲ್ಲಿ ಯುವಕ ಅತ್ಯಾಚಾರ ಎಸಗಿರುವುದಾಗಿ ಮಹಿಳೆ ಆರೋಪಿಸಿ ದೂರು ದಾಖಲಿಸಿದ್ದಾಳೆ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ರವೀಂದ್ರ ವಿಶ್ವಕರ್ಮ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ತನ್ನ ವಿರುದ್ಧದ ಆರೋಪ ಒಪ್ಪಿಕೊಂಡಿದ್ದಾನೆ. ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದೂ ಅವರು ವಿವರಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಎಚ್ಚರ..! ಮದ್ಯ ಸೇವಿಸಿ 28 ಮಂದಿ ಸಾವು?