Select Your Language

Notifications

webdunia
webdunia
webdunia
webdunia

26/11 ಮುಂಬೈ ದಾಳಿ: ಮಾಸ್ಟರ್ ಮೈಂಡ್ ರಾಣಾ ಬಾಯಿಂದ್ದ ಹೊರಬಿತ್ತು ಭಯಾನಕ ಸತ್ಯ

ತಹವ್ವುರ್ ಹುಸೇನ್ ರಾಣಾ

Sampriya

ನವದೆಹಲಿ , ಸೋಮವಾರ, 7 ಜುಲೈ 2025 (14:39 IST)
ನವದೆಹಲಿ: ಎನ್‌ಐಎ ವಶದಲ್ಲಿರುವ 26/11 ಮುಂಬೈ ದಾಳಿಯ ಪ್ರಮುಖ ಸಂಚುಕೋರ ತಹವ್ವುರ್ ಹುಸೇನ್ ರಾಣಾ ಅವನ ಬಾಯಿಂದ ಭಯಾನಕ ವಿಚಾರಗಳು ಹೊರಬಿದ್ದಿದೆ. 

ಈತ ಮುಂಬೈ ದಾಳಿಯ ಸಂದರ್ಭದಲ್ಲಿ ನಗರದಲ್ಲಿದ್ದು, ಪಾಕಿಸ್ತಾನಿ ಸೇನೆಯ ವಿಶ್ವಾಸಾರ್ಹ ಏಜೆಂಟ್ ಆಗಿ ಕೆಲಸ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ಸಿವೆ.

ದೆಹಲಿಯ ತಿಹಾರ್ ಜೈಲಿನಲ್ಲಿ ಎನ್‌ಐಎ ವಶದಲ್ಲಿರುವ ರಾಣಾ, ತಾನು ಮತ್ತು ಆತನ ಸ್ನೇಹಿತ ಮತ್ತು ಸಹಾಯಕ ಡೇವಿಡ್ ಕೋಲ್‌ಮನ್ ಹೆಡ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾದೊಂದಿಗೆ ಹಲವಾರು ತರಬೇತಿ ಅವಧಿಗಳನ್ನು ಹೊಂದಿರುವುದಾಗಿ ಹೇಳಿದ್ದಾರೆ. 

ಎಲ್‌ಇಟಿ ಮುಖ್ಯವಾಗಿ ಬೇಹುಗಾರಿಕಾ ಜಾಲವಾಗಿ ಕೆಲಸ ಮಾಡಿದೆ ಎಂದು ರಾಣಾ ಹೇಳಿದ್ದಾನೆ.

26/11 ದಾಳಿಯ ಸಂದರ್ಭದಲ್ಲಿ ತಾನು ಮುಂಬೈನಲ್ಲಿದ್ದೆ ಮತ್ತು ಅದು ಭಯೋತ್ಪಾದಕರ ಯೋಜನೆಯ ಭಾಗವಾಗಿತ್ತು ಎಂದು ಅವನು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಂತಹ ಸ್ಥಳಗಳನ್ನು ಪರಿಶೀಲಿಸಿದ್ದು, 26/11 ದಾಳಿಯನ್ನು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಸಹಯೋಗದೊಂದಿಗೆ ನಡೆಸಲಾಗಿದೆ ಎಂದು ಹೇಳಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

Video: 18 ಅಡಿ ಉದ್ದದ ಹಾವನ್ನು ಏಕಾಂಗಿಯಾಗಿ ಸೆರೆಹಿಡಿದ ಕೆಚ್ಚೆದೆಯ ಮಹಿಳಾ ಅಧಿಕಾರಿ