Publish Date: Tue, 05 Dec 2017 (11:49 IST)
Updated Date: Tue, 05 Dec 2017 (11:58 IST)
ದೆಹಲಿ: ಬಹುಕೋಟಿ 2 ಜಿ ಸ್ಪೆಕ್ಟ್ರಮ್ ಹಗರಣದ ತೀರ್ಪು ಡಿಸೆಂಬರ್ 21ಕ್ಕೆ ಪ್ರಕಟವಾಗಲಿದೆ. ಇಡೀ ದೇಶವನ್ನೇ ನಡುಗಿಸಿದ 2 ಜಿ ಹಗರಣದ ತೀರ್ಪು ಡಿಸೆಂಬರ್ 21ಕ್ಕೆ ಪ್ರಕಟಿಸಲು ಸಿಬಿಐ ವಿಶೇಷ ಕೋರ್ಟ್ ನಿರ್ಧರಿಸಿದೆ.
ದೇಶದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾದ 2ಜಿ ಹಗರಣದ ತೀರ್ಪನ್ನು ಡಿಸೆಂಬರ್ 21ಕ್ಕೆ ನೀಡಲು ಸಿಬಿಐ ವಿಶೇಷ ಕೋರ್ಟ್ ತೀರ್ಮಾನಿಸಿದೆ. ಈ ತೀರ್ಮಾನದಲ್ಲಿ ಆರೋಪಿಗಳ ಭವಿಷ್ಯ ಅಡಗಿದೆ.
ಡಿ.ಎಂ.ಕೆ ನಾಯಕ .ರಾಜ, ಕನಿಮೋಳಿ ಅವರ ಭವಿಷ್ಯ ಡಿಸೆಂಬರ್ 21ಕ್ಕೆ ನಿರ್ಧಾರವಾಗಲಿದೆ. ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳು ಕೋರ್ಟ್ ನಲ್ಲಿ ಹಾಜರಿರಲು ಕೋರ್ಟ್ ಸೂಚನೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ