Select Your Language

Notifications

webdunia
webdunia
webdunia
webdunia

ರೆಡ್ಡಿ ವಿರುದ್ಧ ಸಿಎಂ ಮಾಸ್ಟರ್ ಪ್ಲಾನ್: ಮತ್ತೆ ಜೈಲು ಪಾಲಾಗ್ತಾರ ಗಾಲಿ ಜನಾರ್ದನ ರೆಡ್ಡಿ?

ರೆಡ್ಡಿ ವಿರುದ್ಧ ಸಿಎಂ ಮಾಸ್ಟರ್ ಪ್ಲಾನ್: ಮತ್ತೆ ಜೈಲು ಪಾಲಾಗ್ತಾರ ಗಾಲಿ ಜನಾರ್ದನ ರೆಡ್ಡಿ?
ಬೆಂಗಳೂರು , ಮಂಗಳವಾರ, 7 ನವೆಂಬರ್ 2017 (09:48 IST)
ಬೆಂಗಳೂರು: ಅಕ್ರಮ ಗಣಿಗಾರಿಕೆಯ ಹಳೆ ಪ್ರಕರಣಗಳಿಗೆ ರಾಜ್ಯ ಸರ್ಕಾರ ಮರುಜೀವ ನೀಡುತ್ತಿದ್ದು, ಹೀಗಾಗಿ ಬಿಜೆಪಿ ವಿರುದ್ಧ ಮತ್ತೊಂದು ಅಸ್ತ್ರ ಬಳಸಿಕೊಳ್ಳಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದ್ಯ ಎನ್ನುವ ಪ್ರಶ್ನೆ ಮೂಡಿದೆ.

ಸಿಎಂ ಸೂಚನೆಯಂತೆ ಸಂಪುಟ ಉಪ ಸಮಿತಿ ಸಭೆ ನಡೆಸಿದ ಸಚಿವ ಹೆಚ್.ಕೆ.ಪಾಟೀಲ್, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ವಿಶೇಷ ಆಸಕ್ತಿ ತೋರಿದ್ದಾರೆ. ಈಗಾಗಲೇ ಗಾಲಿ ಜನಾರ್ದನ ರೆಡ್ಡಿ ಗದಗ ಜಿಲ್ಲೆಯ 7 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು, ರೆಡ್ಡಿಯನ್ನ ಮಟ್ಟಹಾಕಲು ಹೆಚ್.ಕೆ.ಪಾಟೀಲ್ ಮುಂದಾಗಿದ್ದಾರೆ. ಸಂಪುಟ ಉಪ-ಸಮಿತಿಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ಮುಂದಿನ ಸಚಿವ ಸಂಪುಟ ಸಭೆಗೆ ಕಳುಹಿಸಿ ಕೊಡಲಿದ್ದಾರೆ. ಇದನ್ನು ಸಂಪುಟ ಸಭೆಯಲ್ಲಿ ಉಪ ಸಮಿತಿ ಶಿಫಾರಸ್ಸು ಅಂಗೀಕರಿಸುವ ಸಾಧ್ಯತೆಯಿದೆ.

ನಂತರ ಈ ನಿರ್ಣಯವನ್ನು ಗೃಹ ಇಲಾಖೆಗೆ ರವಾನೆ ಮಾಡಲಾಗುತ್ತದೆ. ಇತ್ತೀಚೆಗಷ್ಟೇ ಜನಾರ್ದನ ರೆಡ್ಡಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ ರಿಲೀಸ್ ಮಾಡಿತ್ತು. ಹೀಗಾಗಿ ರೆಡ್ಡಿ ಮುಂದಿನ ಚುನಾವಣೆಯಲ್ಲಿ ತಮ್ಮ ಆಸ್ತಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಗೃಹ ಇಲಾಖೆಯಿಂದ ಹೊಸ ವಿಶೇಷ ತನಿಖಾ ತಂಡ ರಚಿಸಿ, ರೆಡ್ಡಿ ವಿರುದ್ಧ ಹೊಸ ಎಫ್ಐಆರ್ ದಾಖಲು ಮಾಡಿ, ರೆಡ್ಡಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಚಿಂತನೆ ನಡೆಸುತ್ತಿದೆ.

ಗುಪ್ತಚರ ಇಲಾಖೆಗೆ ಈಗಾಗಲೇ ಕೆಲ ಸೂಚನೆ ನೀಡಿರುವ ಸಿಎಂ ಸಿದ್ಧರಾಮಯ್ಯ, ರೆಡ್ಡಿ ವಿರುದ್ಧ ಎಫ್ಐಆರ್ ದಾಖಲಾಗುವವರೆಗೂ ಅವರ ಚಲನವಲನದ ಮೇಲೆ ನಿಗಾವಹಿಸಲು ಸೂಚಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ರೆಡ್ಡಿ ಹಣವನ್ನಿ ಚುನಾವಣೆಗೆ ಬಳಸಿಕೊಳ್ಳಬಹುದು ಎಂಬುದನ್ನು ಅರಿತಿರುವ ಸಿಎಂ, ಮುಂದಿನ ಚುನಾವಣೆ ಘೋಷಣೆಯಾಗುವುದರೊಳಗೆ ರೆಡ್ಡಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಮ್ಮಗನ ಸ್ಪರ್ಧೆಗೆ ದೇವೇಗೌಡರ ಕುಟುಂಬದಲ್ಲೇ ಭಿನ್ನಮತ?