Select Your Language

Notifications

webdunia
webdunia
webdunia
webdunia

ಇಂತಹ ಮುಖ್ಯಮಂತ್ರಿಯನ್ನು ನೋಡಿಯೇ ಇಲ್ಲ: ಸಿಎಂಗೆ ಕೋಳಿವಾಡ್ ಪ್ರಶಂಸೆ

ಇಂತಹ ಮುಖ್ಯಮಂತ್ರಿಯನ್ನು ನೋಡಿಯೇ ಇಲ್ಲ: ಸಿಎಂಗೆ ಕೋಳಿವಾಡ್ ಪ್ರಶಂಸೆ
ಬೆಂಗಳೂರು , ಭಾನುವಾರ, 5 ನವೆಂಬರ್ 2017 (16:31 IST)
ಸಿಎಂ ಸಿದ್ದರಾಮಯ್ಯ ಸಾಮಾಜಿಕ ನ್ಯಾಯಕ್ಕೆ ಬದ್ಧರಾದಂತಹವರು. ಇಂತಹ ಮುಖ್ಯಮಂತ್ರಿಯನ್ನು ನಾನು ರಾಜಕೀಯ ಜೀವನದಲ್ಲಿ ನೋಡಿಯೇ ಇಲ್ಲ ಎಂದು ಸಭಾಪತಿ ಕೆ.ಬಿ.ಕೋಳಿವಾಡ್ ಪ್ರಶಂಸಿದ್ದಾರೆ.
ತಮ್ಮ ಹುಟ್ಟ ಹಬ್ಬ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಸಚಿವರನ್ನಾಗಿ ಮಾಡುವಂತೆ ಸಿದ್ದರಾಮಯ್ಯರಿಗೆ ಮನವಿ ಮಾಡಿದ್ದೆ. ಆದರೆ, ನನ್ನ ಕ್ಷೇತ್ರದ ಮತ್ತೊಬ್ಬರನ್ನು ಸಚಿವರನ್ನಾಗಿ ಮಾಡಿದರು. ನನಗೆ ಸಚಿವರನ್ನಾಗಿ ಮಾಡಲಿಲ್ಲ ಎಂದರು.
 
ನನಗೆ ಸಚಿವ ಸ್ಥಾನ ನೀಡಿದ್ರೆ ಸಾಮಾಜಿಕ ನ್ಯಾಯಕ್ಕೆ ಅನ್ಯಾಯವಾಗುತ್ತಿತ್ತು. ಸಿಎಂ ಸಿದ್ದರಾಮಯ್ಯ ನನಗೆ ಆತ್ಮಿಯರಾಗಿದ್ದರೂ ಸಚಿವ ಸ್ಥಾನ ನೀಡಲಿಲ್ಲ. ಇದು ಅವರು ಸಾಮಾಜಿಕ ನ್ಯಾಯಕ್ಕೆ ತೋರುವ ಬದ್ದತೆ ಎಂದು ಹೊಗಳಿದರು.
 
ಸಿಎಂ ಸಿದ್ದರಾಮಯ್ಯ ಬಡವರ, ದೀನದಲಿತರ, ಶೋಷಿತರ ಮತ್ತು ಆರ್ಥಿಕವಾಗಿ ಹಿಂದುಳಿದವರ ಏಳಿಗೆಗಾಗಿ ಹಗಲಿರಳು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಸಭಾಪತಿ ಕೆ.ಬಿ.ಕೋಳಿವಾಡ್ ಸಂತಸ ವ್ಯಕ್ತಪಡಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ತಂದೆಗೆ ಹುಟ್ಟಿದವ ಲಿಂಗಾಯುತ, ಐವರು ತಂದೆಗೆ ಹುಟ್ಟಿದವ ವೀರಶೈವ: ಸ್ವಾಮಿಜಿ