Select Your Language

Notifications

webdunia
webdunia
webdunia
webdunia

ದರ ಏರಿಕೆ ನಿಯಂತ್ರಿಸಿ ಉದ್ಯೋಗ ಸೃಷ್ಟಿಸದಿದ್ರೆ ರಾಜೀನಾಮೆ ನೀಡಿ: ಮೋದಿಗೆ ರಾಹುಲ್ ಟಾಂಗ್

ದರ ಏರಿಕೆ ನಿಯಂತ್ರಿಸಿ ಉದ್ಯೋಗ ಸೃಷ್ಟಿಸದಿದ್ರೆ ರಾಜೀನಾಮೆ ನೀಡಿ: ಮೋದಿಗೆ ರಾಹುಲ್ ಟಾಂಗ್
ವಡೋದರಾ , ಭಾನುವಾರ, 5 ನವೆಂಬರ್ 2017 (15:06 IST)
ಅಗತ್ಯ ವಸ್ತುಗಳ ದರ ಏರಿಕೆ ನಿಯಂತ್ರಣ ಮತ್ತು ಜನರಿಗೆ ಉದ್ಯೋಗಗಳನ್ನು ಸೃಷ್ಟಿ ಮಾಡಲು ಸಾಧ್ಯವಾಗದಿದ್ದಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಪೊಳ್ಳು ಭಾಷಣಗಳನ್ನು ಮಾಡುವುದರಲ್ಲಿಯೇ ನಿಸ್ಸಿಮರು. ಪೊಳ್ಳು ಭಾಷಣ ಮಾಡುತ್ತಾ ದೇಶದ ಜನತೆಯನ್ನು ವಂಚಿಸುತ್ತಿದ್ದಾರೆ ಎಂದು ಗುಡುಗಿದ್ದಾರೆ.
 
ದುಬಾರಿ ಎಲ್‌ಪಿಜಿ ಸಿಲಿಂಡರ್, ದುಬಾರಿ ಅಗತ್ಯ ವಸ್ತುಗಳು, ಪೊಳ್ಳು ಭಾಷಣ ಮಾಡುವುದೇ ನಿಮ್ಮ ಕಾಯಕವಾಗಿದೆ. ದರ ಏರಿಕೆಯನ್ನು ನಿಯಂತ್ರಿಸಿ. ಉದ್ಯೋಗಗಳನ್ನು ಸೃಷ್ಟಿ ಮಾಡಿ. ಇಲ್ಲವಾದಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಹೊರಡಿ ಎಂದು ಟ್ವಿಟ್ ಮಾಡಿದ್ದಾರೆ.
 
ಟ್ವೀಟ್ ಸಂದೇಶದೊಂದಿಗೆ ಅಗತ್ಯ ವಸ್ತುಗಳ ದರ ಏರಿಕೆ ಕುರಿತಂತೆ ಪ್ರಕಟವಾಗಿರುವ ಪತ್ರಿಕಾ ಲೇಖನ್‌ ಕೂಡಾ ಲಗತ್ತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಗುಜರಾತ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಜನತೆಯನ್ನು ಆಕರ್ಷಿಸುತ್ತಿರುವ ರಾಹುಲ್, ವಿಶೇಷವಾಗಿ ಸಾಮಾಜಿಕ ಅಂತರ್ಜಾಲ ಬಳಕೆದಾರರ ಮನಗೆದ್ದಿದ್ದಾರೆ. ಮೋದಿ ಸರಕಾರದ ವಿರುದ್ಧ ದರ ಏರಿಕೆ, ನಿರುದ್ಯೋಗ, ನೋಟು ನಿಷೇಧ, ದುರ್ಬಲ ಆರ್ಥಿಕತೆ, ಜಿಎಸ್‌ಟಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಸಿ.ಪಿ.ಯೋಗೇಶ್ವರ್‌ರಷ್ಟು ದೊಡ್ಡ ಶಕ್ತಿ ನನಗಿಲ್ಲ: ಡಿ.ಕೆ.ಶಿವಕುಮಾರ್