Publish Date: Thu, 02 Nov 2017 (13:31 IST)
Updated Date: Thu, 02 Nov 2017 (13:33 IST)
ಬೆಂಗಳೂರು: ಮೈಸೂರಿನಲ್ಲಿ ನಾಕಾಬಂದಿ ಮೂಲಕ ಕಾರ್ಯಕರ್ತರನ್ನು ತಡೆಯಲಾಗುತ್ತಿದೆ. ಎಫ್ ಡಿಐ ಮತ್ತು ಕೆಎಫ್ ಡಿ ಕಾರ್ಯಕರ್ತರನ್ನು ಬೇಕಾದ್ರೆ ತಡೆಯಿರಿ ಎಂದು ಸರ್ಕಾರದ ವಿರುದ್ಧ ಸಂಸದ ಪ್ರಹ್ಲಾದ್ ಜೋಷಿ ವಾಗ್ದಾಳಿ ನಡೆಸಿದ್ದಾರೆ.
ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ನಮ್ಮ ಬಡ ಕಾರ್ಯಕರ್ತರನ್ನು ತಡೆಯಬೇಡಿ. ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳನ್ನ ಗಂಡ ಮತ್ತು ಹೆಂಡತಿ ಹಾಗೂ ಕಳ್ಳನಿಗೆ ಹೋಲಿಕೆ ಮಾಡಿ ವ್ಯಂಗ್ಯವಾಡಿದ್ದಾರೆ.
ಇದು ಬಹಳ ದಿನ ನಡೆಯುವುದಿಲ್ಲ ಎಂದು ಕಾರ್ಯಕರ್ತರನ್ನು ತಡೆದ ಪೊಲೀಸ್ ರಿಗೆ ಅವಾಜ್ ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಮನಸ್ಸಿಗೆ ಬಂದಂತ್ತೆ ಹೇಳಿಕೆ ನೀಡ್ತಾರೆ. ಸಿದ್ದರಾಮಯ್ಯ ಕಂಡರೆ ಮೋದಿಗೆ ಭಯ ಅಂತ ಹೇಳಿದ್ದಾರೆ. ಅಧಿಕಾರಕ್ಕಾಗಿ ಬೇರೆ ಪಾರ್ಟಿ ಬಿಟ್ಟು ಮೋದಿ ಪ್ರಧಾನಿಯಾಗಿಲ್ಲ. ದೇಶ ಪ್ರೇಮಕ್ಕಾಗಿ ಪ್ರಧಾನಿ ಸ್ಥಾನದಲ್ಲಿದ್ದಾರೆ ಎಂದರು.