Publish Date: Thu, 15 Sep 2022 (09:08 IST)
Updated Date: Thu, 15 Sep 2022 (00:11 IST)
ಮುಂಬೈ : ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಅಧಿಕಾರಿಗಳು ಪುಣೆ ನಗರದಲ್ಲಿ ಡೈರಿ ಉತ್ಪನ್ನಗಳ 2 ಕಾರ್ಖಾನೆಗಳ ಮೇಲೆ ದಾಳಿ ನಡೆಸಿ 2,000 ಕೆಜಿ ಕಲಬೆರಕೆ ಪನ್ನೀರ್ ಮತ್ತು ಕೆನೆರಹಿತ ಹಾಲಿನ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ.
ಕೊಂಡ್ವಾ ಮತ್ತು ವಾನ್ವಾಡಿ ಪ್ರದೇಶದಲ್ಲಿರುವ ಕಾರ್ಖಾನೆಗಳಲ್ಲಿ ತೈಲ ಮತ್ತು ಹಾಲಿನ ಪುಡಿಯನ್ನು ಬಳಸಿ ಕಲಬೆರಕೆ ಪನ್ನೀರ್ ಅನ್ನು ತಯಾರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ತಿಳಿಸಿದ್ದಾರೆ.
ಇದು ಸೆಪ್ಟೆಂಬರ್ 5ರ ಬಳಿಕ ನಡೆಸಲಾದ 3ನೇ ದಾಳಿಯಾಗಿದೆ. ದಾಳಿಯಲ್ಲಿ ಕಲಬೆರಕೆ ಪನ್ನೀರ್ ಮತ್ತು ಇತರ ಡೈರಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಂದು ನಡೆಸಲಾಗಿರುವ ದಾಳಿಯಲ್ಲಿ 2 ಫ್ಯಾಕ್ಟರಿಗಳಿಂದ 2,000 ಕೆಜಿ ಕಲಬೆರೆಕೆ ಪನ್ನೀರ್ ವಶಪಡಿಸಿಕೊಳ್ಳಲಾಗಿದೆ. ಇದು ಸುಮಾರು 25 ಲಕ್ಷ ಮೌಲ್ಯದ್ದಾಗಿದೆ ಎಂದು ಎಫ್ಡಿಎ ಅಧಿಕಾರಿಗಳು ತಿಳಿಸಿದ್ದಾರೆ.