Publish Date: Wed, 14 Sep 2022 (14:40 IST)
Updated Date: Wed, 14 Sep 2022 (14:34 IST)
ಪಣಜಿ : ಗೋವಾದಲ್ಲಿ ಕಾಂಗ್ರೆಸ್ಗೆ ಮತ್ತೊಂದು ಆಘಾತ ಎದುರಾಗಿದೆ. ಕಾಂಗ್ರೆಸ್ನ 11 ಶಾಸಕರ ಪೈಕಿ 8 ಮಂದಿ ವಿಧಾನಸಭಾ ಸ್ಪೀಕರ್ ಅವರನ್ನು ಭೇಟಿಯಾಗಿದ್ದು, ಬಿಜೆಪಿ ಸೇರುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಗೆ ಕಾಂಗ್ರೆಸ್ ಶಾಸಕರು ಪಕ್ಷಾಂತರವಾಗುವ ಮಾತು ಕೇಳಿ ಬರುತ್ತಿದೆ. ಕಾಂಗ್ರೆಸ್ ಶಾಸಕರು ನಮ್ಮ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಸದಾನಂದ ಶೇಟ್ ತನವಾಡೆ ಹೇಳಿದ್ದರು.
ಗೋವಾದಲ್ಲಿ ಕಾಂಗ್ರೆಸ್ 11 ಮಂದಿ ಶಾಸಕರ ಬಲ ಹೊಂದಿತ್ತು. ಎಂಟು ಮಂದಿ ಶಾಸಕರ ವಲಸೆಯಿಂದ ಈ ಸಂಖ್ಯೆ ಮೂರಕ್ಕೆ ಕುಸಿಯುವ ಭೀತಿ ಕಾಂಗ್ರೆಸ್ಗೆ ಎದುರಾಗಿದೆ.
ದಿಗಂಬರ್ ಕಾಮತ್, ಮೈಕೆಲ್ ಲೋಬೋ, ಡೆಲಿಲಾ ಲೋಬೋ, ರಾಜೇಶ್ ಫಲ್ದೇಸಾಯಿ, ಕೇದಾರ್ ನಾಯ್ಕ್, ಸಂಕಲ್ಪ್ ಅಮೋನ್ಕರ್, ಅಲೆಕ್ಸೋ ಸಿಕ್ವೇರಾ ಮತ್ತು ರಡಾಲ್ಫ್ ಫೆರ್ನಾಂಡಿಸ್ ಇಂದು ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ. ಇವರು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಭೇಟಿಯಾಗಿದ್ದಾರೆ.