Select Your Language

Notifications

webdunia
webdunia
webdunia
webdunia

ರುಚಿಕರವಾದ ಪನ್ನೀರ್ ಮಸಾಲ ರೆಸಿಪಿ

ಚಳಿಗಾಲ
ಚಳಿಗಾಲದ ಸಂದರ್ಭದಲ್ಲಿ ನಾಲಿಗೆ ರುಚಿಕರವಾದ ಹಾಗೂ ಬಿಸಿಬಿಸಿಯಾದ ಖಾದ್ಯವನ್ನು ಸವಿಯಲು ಬಯಸುತ್ತದೆ.

ಅದರಲ್ಲೂ ರೋಟಿ, ಬಟಾರ್ ನಾನ್ ಹಾಗೂ ಪನ್ನೀರ್ ಮಸಾಲ ಕಾಂಬಿನೇಶನ್ ಎಷ್ಟು ರುಚಿ ಅಲ್ವಾ. ನೀವು ಮನೆಯಲ್ಲಿಯೇ ಪನ್ನೀರ್ ಮಸಾಲ ಮಾಡಬಹುದು. ಹೊಸ ಅಡುಗೆ ಮಾಡಲು ಟ್ರೈ ಮಾಡುತ್ತಿದ್ದರೆ ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು
* ಎಣ್ಣೆ- ಅರ್ಧ ಕಪ್
* ಲವಂಗ – 2
* ಚೆಕ್ಕೆ – 2
* ಹಸಿಮೆಣಸು -3
* ಏಲಕ್ಕಿ – 3
* ಈರುಳ್ಳಿ _ 3
* ದನಿಯಾ ಪುಡಿ _ 1 ಚಮಚ
* ಖಾರದ ಪುಡಿ – 1 ಚಮಚ
* ಅರಶಿಣ ಪುಡಿ – 1 ಚಮಚ
* ಮೊಸರು – 1 ಕಪ್
* ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
* ಜೀರಿಗೆ ಪುಡಿ – 1 ಚಮಚ
* ಟೊಮೆಟೋ – 2
* ಮೊಸರು – 2 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಪನ್ನೀರ್ – 200 ಗ್ರಾಂ
* ಹಸಿರು ಮೆಣಸಿನಕಾಯಿ – 4
* ಗರಂ ಮಸಾಲೆ – 1 ಚಮಚ
* ಬೆಣ್ಣೆ – 1 ಚಮಚ
* ಕೊತ್ತಂಬರಿ ಸೊಪ್ಪು – 2 ಚಮಚ
* ಒಣ ಮೆಂತೆ ಸೊಪ್ಪು ಹುಡಿ – 1 ಚಮಚ
ಮಾಡುವ ವಿಧಾನ
* ಮೊದಲಿಗೆ ಬಾಣಲೆಗೆ ಎಣ್ಣೆ ಹಾಕಬೇಕು. ನಂತರ ಚೆಕ್ಕೆ, ಏಲಕ್ಕಿ, ಲವಂಗ, ಈರುಳ್ಳಿ ಹಾಕಿ ಸರಿಯಾಗಿ ಫ್ರೈ ಮಾಡಿ.
* ಬಳಿಕ ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಖಾರದ ಪುಡಿ, ಅರಶಿನ ಪುಡಿ, ಇದರ ಜೊತೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ.
* ನಂತರ ಅದೇ ಬಾಣಲೆಗೆ ಟೊಮೆಟೋ ಪೇಸ್ಟ್, ಮೊಸರು, ಎರಡು ಕಪ್ನಷ್ಟು ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಬೇಕು. 
* ಹಸಿ ಮೆಣಸಿನಕಾಯಿ, ಗರಂ ಮಸಾಲೆ ಹಾಕಿ. ಕೊತ್ತಂಬರಿ ಸೊಪ್ಪು ಹಾಕಿ ಬೇಯಿಸಿದರೆ ರುಚಿಯಾದ ಪನ್ನೀರ್ ಮಸಾಲ ಸವಿಯಲು ಸಿದ್ಧವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೆಂಪು ಬಾಳೆಹಣ್ಣಿನಿಂದ ಆರೋಗ್ಯದ ಗುಟ್ಟು ತಿಳಿಯಿರಿ!