ತಿರುವನಂತರಪುರಂ: ಹೆತ್ತ ತಂದೆಯಿಂದಲೇ ಅತ್ಯಾಚಾರಕ್ಕೊಳಗಾದ 10 ವರ್ಷದ ಬಾಲಕಿ ಗರ್ಭಿಣಿಯಾಗಿದ್ದು, ಆಕೆಯ ಗರ್ಭಪಾತಕ್ಕೆ ಅನುಮತಿ ಕೇಳಿ ತಾಯಿ ಕೋರ್ಟ್ ಮೊರೆ ಹೋದ ಘಟನೆ ಕೇರಳದಲ್ಲಿ ನಡೆದಿದೆ.
ಈ ಘಟನೆಯ ತನಿಖೆ ನಡೆಸಿದ ನ್ಯಾಯಾಲಯ ಇದು ನಾಗರಿಕ ಸಮಾಜವೇ ತಲೆ ತಗ್ಗಿಸುವ ವಿಚಾರ ಎಂದಿದೆ. ಇನ್ನು, 10 ವರ್ಷದ ಬಾಲಕಿಗೆ ಗರ್ಭಪಾತ ಮಾಡಲು ಸೂಕ್ತ ವೈದ್ಯಕೀಯ ಪರೀಕ್ಷೆಗೆ ಸೂಚನೆ ನೀಡಿದೆ.
ಒಂದು ವೇಳೆ ಮಗು ಬದುಕುಳಿಯುವ ಸ್ಥಿತಿಯಿದ್ದರೆ, ಪೋಷಕರು ಮಗುವನ್ನು ಪಾಲನೆ ಮಾಡಲು ಬಯಸದೇ ಇದ್ದರೆ ಶಿಶು ಪಾಲನಾ ಸಮಿತಿಯು ಮಗುವಿನ ಜವಾಬ್ಧಾರಿ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ತೀರ್ಪಿತ್ತಿದೆ.