Publish Date: Sat, 12 Mar 2022 (09:25 IST)
Updated Date: Sat, 12 Mar 2022 (09:36 IST)
ಧಾರವಾಡ: ಪತ್ನಿಯನ್ನು ರಾಡ್ ನಿಂದ ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಊಟ ಮುಗಿಸಿ ಮನೆಯಲ್ಲಿ ಮಲಗಿದ್ದ ಪತ್ನಿ ಜೊತೆ ಕುಡಿದ ಮತ್ತಿನಲ್ಲಿ ಪತಿ ಕ್ಷುಲ್ಲುಕ ಕಾರಣಕ್ಕೆ ಜಗಳವಾಡಿದ್ದ. ಇದೇ ಸಿಟ್ಟಿನಲ್ಲಿ ಆಕೆಯ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದ. ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆ.
ಈ ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ. ಎರಡು ದಿನಗಳ ಹಿಂದೆಯೂ ಪತಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಪತ್ನಿ ತಡೆದಿದ್ದಳು. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.