Select Your Language

Notifications

webdunia
webdunia
webdunia
Sunday, 13 April 2025
webdunia

ಅಸಹಜ ಸಾವಿನ ಶಂಕೆ: ಮೃತದೇಹ ಹೊರತೆಗೆದು ಶವಪರೀಕ್ಷೆ

ಅಸಹಜ ಸಾವು
ಮೈಸೂರು , ಶನಿವಾರ, 12 ಮಾರ್ಚ್ 2022 (08:55 IST)
ಮೈಸೂರು: ಅಸಹಜ ಸಾವಿನ ಶಂಕೆಯಿಂದ ಹೂತಿಟ್ಟ ವ್ಯಕ್ತಿಯ ಶವವನ್ನು ಮರಳಿ ಹೊರತೆಗೆದು ತಹಶೀಲ್ದಾರ್ ನೇತೃತ್ವದಲ್ಲಿ ಶವ ಪರೀಕ್ಷೆ ನಡೆಸಿದ್ದಾರೆ.

ವಿನೋದ್ ಎಂಬ ವ್ಯಕ್ತಿ ಕೆಲವು ದಿನಗಳ ಮೊದಲು ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ದಾಗಿ ಅವರ ಪತ್ನಿ ಮನೆಯವರಿಗೂ ಹೇಳದೇ ಅಂತ್ಯ ಸಂಸ್ಕಾರ ಮಾಡಿದ್ದರು.

ಆದರೆ ತಮ್ಮ ಮಗನ ಸಾವಿನಲ್ಲಿ ಸೊಸೆ ಕೈವಾಡವಿದೆಯೆಂದು ಅನುಮಾನಿಸಿ ವಿನೋದ್ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರ ತಂಡ ಶವವನ್ನು ಮರಳಿ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದೆ. ವರದಿ ಬಳಿಕ ನಿಜಾಂಶ ಬಯಲಿಗೆ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನ ಎದುರೇ ನಡೆಯಿತು ಪ್ರಿಯತಮೆಯ ಅತ್ಯಾಚಾರ