ಬೆಂಗಳೂರು: ತನ್ನ ಕ್ಯಾಬ್ ನಲ್ಲಿ ಬಂದ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಚಾಲಕನನ್ನು ಬಂಧಿಸಲಾಗಿದೆ.
31 ವರ್ಷದ ಚಾಲಕನ ಕ್ಯಾಬ್ ನಲ್ಲಿ ಯುವತಿ ಬುಧವಾರ ರಾತ್ರಿ ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳಿದ್ದಳು. ಈ ವೇಳೆ ಯುವತಿ ಮದ್ಯಪಾನ ಮಾಡಿದ್ದಳು. ಅವಳ ಜೊತೆಗೆ ಇನ್ನಿಬ್ಬರು ಯುವತಿಯರಿದ್ದರು.
ಆದರೆ ಇದನ್ನೇ ದುರುಪಯೋಗಿಸಿಕೊಂಡ ಚಾಲಕ ಯುವತಿಯ ಖಾಸಗಿ ಅಂಗಾಂಗ ಸ್ಪರ್ಶಿಸಿ ಅಸಭ್ಯ ವರ್ತನೆ ಮಾಡಿದ್ದಾರೆ. ಬೆಳಿಗ್ಗೆ ಯುವತಿ ಈ ಬಗ್ಗೆ ಕ್ಯಾಬ್ ಚಾಲಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.