Publish Date: Fri, 11 Mar 2022 (10:20 IST)
Updated Date: Fri, 11 Mar 2022 (10:25 IST)
ಗದಗ: ಮುಸ್ಲಿಂ ಯುವಕನ ಜೊತೆ ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದ ಯುವತಿ ಈಗ ಪತಿಯಿಂದಲೇ ಹಲ್ಲೆಗೊಳಗಾದ ಘಟನೆ ನಡೆದಿದೆ.
2018 ರಲ್ಲಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದ ಜೋಡಿ ಕೆಲವು ಕಾಲ ಚೆನ್ನಾಗಿಯೇ ಇದ್ದರು. ಈ ನಡುವೆ ಒಂದು ಮಗುವೂ ಆಗಿತ್ತು. ಆದರೆ ಆ ಬಳಿಕ ಕ್ಯಾತೆ ಶುರು ಮಾಡಿದ್ದ ಗಂಡ ಮುಸ್ಲಿಂ ಸಂಪ್ರದಾಯ ಪಾಲಿಸಲು ಒತ್ತಾಯ ಮಾಡಿದ್ದ. ಇದಕ್ಕೂ ಯುವತಿ ಒಪ್ಪಿದ್ದಳು.
ಆದರೆ ಈ ನಡುವೆ ಪತಿಗೆ ಈಗಾಗಲೇ ಮದುವೆಯಾಗಿ ಮಕ್ಕಳೂ ಇರುವ ವಿಚಾರ ಯುವತಿಯ ಗಮನಕ್ಕೆ ಬಂತು. ಹೀಗಾಗಿ ಯುವತಿ ತವರು ಮನೆಗೆ ವಾಪಸಾಗಿದ್ದು, ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಳು. ಇದರಿಂದ ಸಿಟ್ಟಿಗೆದ್ದ ವ್ಯಕ್ತಿ ಯುವತಿ ಟೂ ವೀಲರ್ ಕಲಿಯಲು ಮೈದಾನಕ್ಕೆ ಬಂದಿದ್ದಾಗ ಆಕೆಯ ಮೇಲೆ ಚಾಕುವಿನಿಂದ ಇರಿದಿದ್ದಾರೆ. ತೀವ್ರವಾಗಿ ಗಾಯಗೊಂಡ ಯುವತಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.