ಮದುವೆಗಾಗಿ ಕೂದಲು ಕಸಿ ಮಾಡಿಸಿಕೊಂಡು ಸಾವಿಗೆ ಶಾರಣಾದ ಎಚ್ಚರ!

Webdunia
ಭಾನುವಾರ, 13 ಮಾರ್ಚ್ 2022 (08:22 IST)
ಪಾಟ್ನಾ : ಮದುವೆಗಾಗಿ ಕೂದಲು ಕಸಿ ಮಾಡಿಕೊಂಡವ ಮರುದಿನವೇ ಸಾವನ್ನಪ್ಪಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಮನೋರಂಜನ್ ಪಾಸ್ವಾನ್ ಮೃತನಾಗಿದ್ದಾನೆ. ಈತ ಬಿಹಾರ ಮಿಲಿಟರಿ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದನು. ಕೂದಲು ಕಸಿಗೆ ಒಳಗಾಗಿದ್ದ ಈತ ಔಷಧದ ಪರಿಣಾಮದಿಂದ ಕಸಿ ಮಾಡಿಕೊಂಡ ಒಂದೇ ದಿನದಲ್ಲಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆ.

ಮನೋರಂಜನ್ಗೆ ಮೇ 11 ರಂದು ಈ ವ್ಯಕ್ತಿಯ ಮದುವೆ ನಿಶ್ಚಯವಾಗಿತ್ತು. ಕೂದಲು ಕಸಿ ಮಾಡಿಸಿಕೊಳ್ಳುವ ಸಲುವಾಗಿ ಪಾಟ್ನಾಗೆಹೀಗಿದ್ದನು. ಖಾಸಗಿ ಕ್ಲಿನಿಕ್ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಕೂದಲು ಕಸಿಗೆ ಒಳಗಾಗಿದ್ದನು.

ಕಸಿ ನಂತರ ಚರ್ಮದ ತುರಿಕೆಯ ಅನುಭವ ಹೇಳಿಕೊಂಡಿದ್ದನು. ಪಾಸ್ವಾನ್ ಸ್ನೇಹಿತ ಕಮಲ್ ಕುಮಾರ್ ಮರುದಿನ ಕ್ಲಿನಿಕ್ಗೆ ಕರೆದೊಯ್ದಿದ್ದರು. ಪಾಸ್ವಾನ್ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. 

ನಂತರ ಕ್ಲಿನಿಕ್ ಸಿಬ್ಬಂದಿ ಪಾಸ್ವಾನ್ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಐಸಿಯುನಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಪ್ಲಾಸ್ಟಿಕ್ ಸರ್ಜನ್, ಕಾರ್ಡಿಯಾಕ್ ಸರ್ಜನ್, ಇಂಟರ್ನಲ್ ಮೆಡಿಸಿನ್ ಮತ್ತು ಐಸಿಯು ತಜ್ಞರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಒಂದು ಗಂಟೆಯ ನಂತರ ಪಾಸ್ವಾನ್ ಸಾವನ್ನಪ್ಪಿದ್ದಾನೆ. ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ವೇಳೆ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕ್ಯಾಬಿನ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ, ಪೈಲಟ್ ವಿರುದ್ಧ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲೆಗೆ ಶೀಘ್ರದಲ್ಲೇ ಆನೆ ಕಾರ್ಯಪಡೆ

ಕೇರಳದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳಲ್ಲಿ ಭಾರೀ ಮಳೆ

ಧರ್ಮಸ್ಥಳ ಬುರುಡೆ ಪ್ರಕರಣ ಪ್ರಮುಖ ಹಂತದಲ್ಲಿರುವಾಗ ಮಹತ್ವದ ಬೆಳವಣಿಗೆ

ದೇವರಿಗೆ ಬಿಟ್ಟಿದ್ದ ಗೋವಿನ ಕಾಲು ಕಡಿದ ಪಾಪಿಗಳು, ಕ್ರಮಕ್ಕೆ ಒತ್ತಾಯ

ಮುಂದಿನ ಸುದ್ದಿ
Show comments