Publish Date: Sat, 12 Mar 2022 (09:35 IST)
Updated Date: Sat, 12 Mar 2022 (09:41 IST)
ಬೆಂಗಳೂರು: ಯುವತಿಯನ್ನು ಚುಡಾಯಿಸಿದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವನ ಸಾವಾಗಿದೆ.
19 ವರ್ಷದ ಥಾಮಸ್ ಎಂಬ ಯುವಕ ಕೊಲೆಗೀಡಾದವ. ಥಾಮಸ್ ಪಕ್ಕದ ಮನೆ ಯುವತಿಯನ್ನು ಆರೋಪಿಗಳು ಚುಡಾಯಿಸಿದ್ದರು. ಇದನ್ನು ಥಾಮಸ್ ತನ್ನ ಸ್ನೇಹಿತರೊಂದಿಗೆ ಆರೋಪಿಗಳ ಮನೆ ಬಳಿ ತೆರಳಿ ಪ್ರಶ್ನೆ ಮಾಡಿದ್ದ.
ಇದೇ ವಿಚಾರಕ್ಕೆ ಎರಡೂ ಗುಂಪಿನ ನಡುವೆ ಘರ್ಷಣೆಯಾಗಿತ್ತು. ಈ ವೇಳೆ ಆರೋಪಿಗಳು ಚಾಕುವಿನಿಂದ ಥಾಮಸ್ ಗೆ ಇರಿದಿದ್ದಾರೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಇದೀಗ ಆರೋಪಿಗಳನ್ನು ಸೆರೆಹಿಡಿಯಲಾಗಿದೆ.