Publish Date: Sat, 17 Oct 2020 (19:47 IST)
Updated Date: Sat, 17 Oct 2020 (19:51 IST)
10 ಲಕ್ಷ ಸರಕಾರಿ ಉದ್ಯೋಗ ಭರ್ತಿ ಮಾಡಲಾಗುವುದು ಎಂದು ಕಾಂಗ್ರೆಸ್, ಆರ್ ಜೆಡಿ ಘೋಷಣೆ ಮಾಡಿವೆ.
ಬಿಹಾರ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ನಡುವೆ ಮಹಾಘಟಬಂಧನ್ ನ ಮಿತ್ರ ಪಕ್ಷಗಳು ತಾವು ಅಧಿಕಾರಕ್ಕೆ ಬಂದರೆ 10 ಲಕ್ಷ ಸರಕಾರಿ ಉದ್ಯೋಗಗಳನ್ನು ಭರ್ತಿ ಮಾಡುವುದಾಗಿ ತಿಳಿಸಿವೆ.
ರೈತರಿಗೆ ಬಡ್ಡಿರಹಿತ ಸಾಲ ಹಾಗೂ ನರೇಗಾ ಕೆಲಸದ ದಿನಗಳನ್ನು ಹೆಚ್ಚು ಮಾಡುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿವೆ.
ಬಿಹಾರದಲ್ಲಿನ ಮಹಾ ಘಟಬಂಧನ್ ನಲ್ಲಿ ಆರ್ ಜೆ ಡಿ, ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸೇರ್ಪಡೆಗೊಂಡಿವೆ.